ಉತ್ಸವ ಮೂರ್ತಿ ನಿರ್ಮಲಾ ಸೀತಾರಾಮನ್..?

Kannada News

04-09-2017

ಪ್ರಧಾನಿ ಮೋದಿ ಅವರು, ನಿರ್ಮಲಾ ಸೀತಾರಾಮನ್ ಅವರನ್ನು ದೇಶದ ರಕ್ಷಣಾ ಮಂತ್ರಿಯಾಗಿ ನೇಮಕ ಮಾಡಿರುವುದಕ್ಕೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೋದಿ ಸರ್ಕಾರ ಬೇಟಿ ಬಚಾವೊ, ಬೇಟಿ ಪಢಾವೊ ಜೊತೆಗೆ, ಬೇಟಾ-ಬೇಟಿ ಬರಾಬರ್ ಅನ್ನುವುದನ್ನೂ ಪಾಲಿಸುತ್ತಿದೆ. ವಿದೇಶಾಂಗ ಖಾತೆ ಮತ್ತು ರಕ್ಷಣಾ ಖಾತೆಗಳ ಹೊಣೆಗಾರಿಕೆಯನ್ನು ಮಹಿಳೆಯರಿಗೆ ನೀಡಿರುವುದು, ಇಡೀ ದೇಶದ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ ಎಂದೂ ಹೊಗಳಲಾಗುತ್ತಿದೆ.

ಆದರೆ, ಮೊದಲ ಬಾರಿ ಸಂಸದೆಯಾಗಿ, ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಖಾತೆಯನ್ನು ನಿರ್ವಹಿಸುವುದು ಅಷ್ಟೇನೂ ಸುಲಭವಾಗುವುದಿಲ್ಲ. ಹೀಗಾಗಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೇ ಒಂದು ರೀತಿಯಲ್ಲಿ ಅಘೋಷಿತ ರಕ್ಷಣಾ ಮಂತ್ರಿಯಾಗಿರುತ್ತಾರೆ. ರಕ್ಷಣಾ ಇಲಾಖೆಯ ರಿಮೋಟ್ ಕಂಟ್ರೋಲ್ ಜಂಟಿಯಾಗಿ ಮೋದಿ-ಜೇಟ್ಲಿ ಕೈಯ್ಯಲ್ಲಿರುತ್ತದೆ, ನಿರ್ಮಲಾ ಅವರು ಸುಮ್ಮನೆ ಉತ್ಸವ ಮೂರ್ತಿಯಂತಿರಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಏಕ ಚಕ್ರಾಧಿಪತ್ಯದ ಮೋದಿ ಸರ್ಕಾರದಲ್ಲಿ ನಿರ್ಮಲ ಸೀತಾರಾಮನ್ ಉತಸವ ಮೂರ್ತಿಯಂತಿದ್ಣರೂ ಸವಾಲನ್ನು ಎದುರಿಸುವ ಧೈರ್ಯವಂತೆ. ಸಂದಿಗ್ದತೆಯನ್ನು ನಿಭಾಯಿಸಬಲ್ಲ ಬುದ್ದಿವಂತೆ, ವೋದಿ ಸರ್ಕಾರಕ್ಕೆ ಚ್ಯುತಿ ಬಾರದಂತೆ ನಡೆಸಬಲ್ಲ ಚತುರೆ ಎಂಬುದು ಧಿಟ.
  • Mahesh Nachaiah
  • ಸಂಪಾದಕ ಪೂಮಾಲೆ ಪತ್ರಿಕೆ