ಇಬ್ಬರು ಉಗ್ರರ ಹತ್ಯೆ !

Kannada News

04-09-2017

ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಪೊಲೀಸರು ಹೇಳಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಸೊಂಪುರ್ ವಲಯದಲ್ಲಿ ಉಗ್ರರು ನುಸುಳಿದ್ದಾರೆ, ಎಂಬ ಬೇಹುಗಾರಿಕೆ ಮೂಲಗಳನ್ನು ಆಧರಿಸಿ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು ಶೊಧನಾ ಕಾರ್ಯಚರಣೆ ಆರಂಭಿಸಿತ್ತು. ಶೊಧನಾ ಕಾರ್ಯ ಮುಂದುವರೆದಂತೆ ಉಗ್ರರು ಶೊಧನಾ ಪಡೆಯ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಪ್ರತಿಯಾಗಿ ಭದ್ರತಾ ಪಡೆ ಹಾರಿಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಮೃತ ಪಟ್ಟಿದ್ದಾರೆ. ಉಗ್ರ ತಾಣದಿಂದ ಎ.ಕೆ.47 ಬಂದೂಕು, ಪಿಸ್ತೂಲು ಸೇರಿದಂತೆ ಕೆಲವು ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದು ಉಳಿದ ಉಗ್ರರ ವಿರುದ್ಧ ಶೊಧನಾ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಶ್ರೀನಗರ ಇಬ್ಬರು ಉಗ್ರರ ಹತ್ಯೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ