ಕಣ್ಣಿಗೆ ಕಾರದ ಪುಡಿ ಎರಚಿ ದರೋಡೆ !

Kannada News

04-09-2017

ಉಡುಪಿ: ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಕಳೆದ ರಾತ್ರಿ 9.15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ, ಇರುವ ಗ್ರೇಶನ್ ಲೋಬೊ ಮಾಲೀಕತ್ವದ ಲೋಬೊ ಚಿಕನ್ ಸೆಂಟರಿಗೆ ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು, ಗ್ರೇಶನ್ ಲೋಬೊ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಬಳಿಕ ಅವರ ಕೈಗಳನ್ನು ಬಳ್ಳಿಯಿಂದ ಕಟ್ಟಿಹಾಕಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಗ್ರೇಶನ್ ಅವರ ತಮ್ಮ ಕೋಳಿಯ ತ್ಯಾಜ್ಯವನ್ನು ಹೊರಗಡೆ ಹಾಕಲು ಹೋಗಿದ್ದು ವಾಪಾಸು ಬಂದು ನೋಡುವಾಗ ಅಣ್ಣ ನೆಲದಲ್ಲಿ ಬಿದ್ದಿದ್ದರು. ಕೂಡಲೇ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದ ಬಳಿಕ, ಅಂಬುಲೆನ್ಸ್ ಮೂಲಕ ಗ್ರೇಶನ್ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಜ್ಞೆ ಬಂದ ಬಳಿಕವಷ್ಟೇ ಎಷ್ಟು ಮಂದಿ ದರೋಡೆ ಕೋರರು ಇದ್ದರು ಎನ್ನುವ ಸ್ಪಷ್ಟ ಮಾಹಿತಿ ಲಭಿಸಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಎರಡು ಮಂದಿ ಕತ್ತಲಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಹಾಗೂ ಕೋಟ ಪಿ.ಎಸ್.ಐ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ