ಯಾವುದೇ ಕಾರಣಕ್ಕೂ ರ‍್ಯಾಲಿ ನಿಲ್ಲುವುದಿಲ್ಲ..?

Kannada News

04-09-2017

ಬೆಂಗಳೂರು: ಮಂಗಳೂರು ಚಲೋ ಕಾರ್ಯಕ್ರಮವು ಸರಕಾರದ ವಿರೋಧದ ನಡುವೆಯು, ನಡದೇ ತೀರುವುದು, ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂ ಯುವಕರ ಹತ್ಯೆಯ ವಿರುದ್ಧ ಈ ಶಾಂತಿಯುತ ರ‍್ಯಾಲಿಯನ್ನು ಪೋಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನಕ್ಕೆ ಬೆದರುವುದಿಲ್ಲ ಮತ್ತು ಜಗ್ಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.  ರ‍್ಯಾಲಿಯನ್ನು ತಡೆಯುವ ಪ್ರಜಾತಂತ್ರ ವಿರೋಧಿ ಕ್ರಮಕ್ಕೆ ತಕ್ಕ ಉತ್ತರ ಯುವ ಮೋರ್ಚಾ ಕಾರ್ಯಕರ್ತರು ನೀಡುತ್ತಾರೆ ಎಂದರು.

ಶಾಂತಿಯುತವಾಗಿ ನಡೆಸಲು ಉದ್ದೇಶಿಸಿರುವ ರ‍್ಯಾಲಿಯನ್ನು ತಡೆಯುವ ಕುತಂತ್ರ ನಡೆದರೆ ಮುಂದಾಗುವ ಪರಿಣಾಮಕ್ಕೆ ರಾಜ್ಯ ಸರ್ಕಾರ ಹೊಣೆ ಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹಿಂದು ವಿರೋಧಿ ಸರಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ನ್ಯಾಯಯುತ ಧ್ವನಿಯನ್ನು ದಮನಿಸುವ ಸರ್ಕಾರದ  ಪ್ರಯತ್ನಕ್ಕೆ ಸೋಲು ಖಚಿತ ಎಂದು ರ‍್ಯಾಲಿಯ ನೇತೃತ್ವ ವಹಿಸಿರುವ ಆರ್.ಅಶೋಕ್ ರವರು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ