ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ !

Kannada News

04-09-2017

ಧಾರವಾಡ: ಸಾಲಬಾಧೆ ತಾಳಲಾರದೆ ಖಾಸಗಿ ಶಿಕ್ಷಣ ಸಂಸ್ಥೆಯ ಅಟೆಂಡರ್ ಒಬ್ಬರು, ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಸೋಮಶೇಖರ್ ಗಜಪತಿ (40) ಮೃತ ವ್ಯಕ್ತಿ. ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದ ಹೊಲದಲ್ಲಿ ನೇಣಿಗೆ ಶರಣಾಗಿದ್ದಾರೆ. ಈತ ಸಾಲದ ಸುಳಿಗೆ ಸಿಲುಕಿ, ಕೈಸಾಲ ಸೇರಿದಂತೆ ಇತರೆಡೆ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಸಾಲ ತೀರಿಸಲಾಗದಿದ್ದು, ಇದರಿಂದ ನೊಂದ ಗಜಪತಿ ನೇಣಿಗೆ ಶರಣಾಗಿದ್ದಾರೆ. ಧಾರವಾಡದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                        ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ