ರೈಲಿಗೆ ಸಿಲುಕಿ ಇಬ್ಬರ ದುರ್ಮರಣ !

Kannada News

04-09-2017

ಬೆಂಗಳೂರು: ರೈಲಿಗೆ ಸಿಕ್ಕಿ ಇಬ್ಬರು ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಸಮೀಪದ ಅರದೇಶಹಳ್ಳಿ ಬಳಿ ನಡೆದಿದೆ. ಹೆಸರಘಟ್ಟ ಹೋಬಳಿ ದಂದನಪಾಳ್ಯದ ರಾಜಣ್ಣ ಹಾಗೂ ದಿಬ್ಬೂರಿನ ಮತ್ತೋರ್ವ ಕೂಲಿ ಕಾರ್ಮಿಕ ಎಂದು ಮೃತರನ್ನು ಗುರುತಿಸಲಾಗಿದೆ. ಕೂಲಿ ಕಾರ್ಮಿಕರು, ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ, ರೈಲ್ವೆ ಹಳಿ ದಾಟುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ರೈಲ್ವೆ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ