ಪೊಲೀಸರ ದರ್ಪ: ತನಿಖೆಗೆ ಆದೇಶ !

Kannada News

02-09-2017

ಬೆಂಗಳೂರು: ಆನೇಕಲ್‍ ನ ನೆರಳೂರು ಬಳಿ, ಅವಧಿ ಮೀರಿದರೂ ತೆಗೆದಿದ್ದ ಬೇಕರಿ ಮುಚ್ಚುವಂತೆ ಬೇಕರಿ ಮಾಲೀಕನ ಮೇಲೆ ದರ್ಪ ತೋರಿ ಅಸಭ್ಯವಾಗಿ ವರ್ತಿಸಿರುವ ಅತ್ತಿಬೆಲೆ ಪೊಲೀಸರ ವಿರುದ್ಧ ತನಿಖೆಗೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ಆದೇಶಿಸಿದ್ದಾರೆ. ಅತ್ತಿಬೆಲೆ ಠಾಣೆಗೆ ಸೇರಿದ ಇಬ್ಬರು ಪೊಲೀಸರು ಮಫ್ತಿಯಲ್ಲಿ ಬಂದು, ಕಳೆದ ರಾತ್ರಿ 10.30 ಗಂಟೆ ಕಳೆದಿದ್ದರೂ, ಸಿಗರೇಟ್ ಪಾನ್ ಮಾರಾಟ ಮಾಡುತ್ತಿದ್ದ ಮೂರು ಬೇಕರಿಗಳಿಗೆ ನುಗ್ಗಿ ಬೇಕರಿ ಮಾಲೀಕನ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ, ಬೇಕರಿಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದ ಕೃತ್ಯ ಸಿಸಿ ಟಿವಿಯಲ್ಲಿ ದಾಖಲಾಗಿತ್ತು.

ನೆರಳೂರಿನಲ್ಲಿ ನಡೆದ ಘಟನೆಯ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಿರುವ ಅಮಿತ್ ಸಿಂಗ್ ಅವರು, ಘಟನೆಯ ಕುರಿತು ತನಿಖೆ ಆದೇಶಿಸಿದ್ದಾರೆ. ತನಿಖೆಯ ವರದಿ ಆಧರಿಸಿ ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ