ತಂದೆಯನ್ನೇ ಕೊಂದ ಮಗ !

Kannada News

02-09-2017

ಬೆಂಗಳೂರು: ಕುಡಿದ ಅಮಲಿನಲ್ಲಿ ಉಂಟಾದ ಜಗಳದಲ್ಲಿ ರೊಚ್ಚಿಗೆದ್ದು ತಂದೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದ ಪುತ್ರನನ್ನು ಕೆಲವೇ ಗಂಟೆಗಳಲ್ಲಿ ಶ್ರೀರಾಮಪುರ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಶ್ರೀರಾಂಪುರದ ರಾಮಚಂದ್ರಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ ಕೃಷ್ಣ ಜೋಶಿ (20)ಬಂಧಿತ ಆರೋಪಿಯಾಗಿದ್ದಾನೆ. ಕುಡಿದ ಅಮಲಿನಲ್ಲಿ ಶುಕ್ರವಾರ ರಾತ್ರಿ ತಂದೆ ಪ್ರೇಮರಾಜ್ (45) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ನೇಪಾಳದ ಪ್ರೇಮರಾಜ್, ಕೆಲಸ ಹುಡುಕಿಕೊಂಡು ಪತ್ನಿ ಹಾಗೂ ಮಗನ ಸಮೇತ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೇ ಮದ್ಯ ವ್ಯಸನಿಯಾಗಿ ದಿನವೂ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ

ಕುಡಿತಕ್ಕೆ ಹಣ ನೀಡುವಂತೆ ಪೀಡಿಸಿ ಗಲಾಟೆ ಮಾಡುತ್ತಿದ್ದ ಪ್ರೇಮ್‍ರಾಜ್ ವರ್ತನೆಯಿಂದ ಬೇಸತ್ತಿದ್ದ ಆರೋಪಿ ಕೃಷ್ಣ ಜೋಶಿ ರಾತ್ರಿ ತಾನೂ ಕುಡಿದು ಮನೆಗೆ ಬಂದಿದ್ದ ಈ ವೇಳೆ  ಕುಡಿದ ಅಮಲಿನಲ್ಲಿದ್ದ ತಂದೆ ಪತ್ನಿ ಹಾಗೂ ಮಗನೊಂದಿಗೆ ಜಗಳ ತೆಗೆದಿದ್ದರು. ಈ ವೇಳೆ ಕೃಷ್ಣ ಚಾಕುವಿನಿಂದ ಅವರ ಎದೆಗೆ ಇರಿದಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಪ್ರಕರಣ ದಾಖಲಿಸಿಕೊಂಡು ಕೃಷ್ಣನನ್ನು ಬಂಧಿಸಿದ್ದೇವೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ತಂದೆಯನ್ನೇ ಕೊಂದ ಮಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ