ಪೋಷಕ ನಟ: ಲಂಬು ನಾಗೇಶ್ ನಿಧನ..

Kannada News

02-09-2017

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಲಂಬು ನಾಗೇಶ್ ಎಂದೇ ಪ್ರಸಿದ್ದರಾಗಿದ್ದ ಪೋಷಕ ನಟ, ನಾಗೇಶ್ ನಗರದಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದ ನಾಗೇಶ್ ಅವರು ರಾತ್ರಿ 8 ರ ವೇಳೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಕಳೆದ ಐದು ದಿನಗಳಿಂದ ಎಮ್. ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಾಗೇಶ್ ಅವರು ಚಿತ್ರರಂಗದಲ್ಲಿ ಲಂಬು ನಾಗೇಶ್ ಅಂತಲೇ ಪ್ರಸಿದ್ಧರಾಗಿದ್ದರು. ದೇವರಾಜ್ ಅಭಿನಯದ 'ಹುಲಿಯಾ', ಸಾಯಿಕುಮಾರ್ ನಟನೆಯ 'ಪೊಲೀಸ್ ಸ್ಟೋರಿ-2' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಲಂಬು ನಾಗೇಶ್ ಕಾಣಿಸಿಕೊಂಡಿದ್ದರು.

ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕನ್ನಡದ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲಂಬು ನಾಗೇಶ್ ನಟಿಸಿದ್ದರು, ಇತ್ತೀಚೆಗೆ ಪ್ರಸಾರ ವಾಗುತ್ತಿದ್ದ ಅಶ್ವಿನಿ ನಕ್ಷತ್ರ, ಹಾಗೂ ದುರ್ಗಾ ಧಾರಾವಾಹಿಗಳಲ್ಲೂ ನಾಗೇಶ್ ನಟಿಸಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಂತಿಮ ಸಂಸ್ಕಾರ ನೆರವೇರಿತು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ