ಅಪಾಯದಲ್ಲಿದೆ ಬೆಂಗಳೂರು..?

Kannada News

02-09-2017

ಬೆಂಗಳೂರು: ದೇಶದ ರಾಜಧಾನಿ ನವದೆಹಲಿಯ ನಂತರ ಮಿತಿ ಮೀರಿದ ವಾಯು ಮಾಲಿನ್ಯ ಹೆಚ್ಚುತ್ತಿರುವ ನಗರಗಳಲಿ ಬೆಂಗಳೂರು ಒಂದಾಗಿದ್ದು ಆತಂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಮೊದಲ ಸ್ಥಾನ ಪಡೆದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಮಟ್ಟ ಏರಿದೆ. ಕಳೆದ 10 ವರ್ಷಗಳಲ್ಲಿ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿಮೀರಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಜನರ ಜೀವಕ್ಕೆ ಕುತ್ತು ತಂದಿದೆ.

ನಗರದಲ್ಲಿ ಒಂದು ದಶಕದಲ್ಲಿ 40ಲಕ್ಷ ವಾಹನಗಳು ಹೆಚ್ಚಳವಾಗಿದ್ದು, 2021-22 ರವೇಳೆಗೆ ಒಂದೂ ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿಯಲಿವೆ ಎನ್ನುವುದನ್ನು ಅಂಕಿ ಅಂಶ ತಿಳಿಸಿದೆ. 1980ರಲ್ಲಿ 1.68ಲಕ್ಷ ವಾಹನಗಳು ನಗರದಲ್ಲಿದ್ದವು, ಅವು ಈಗ  61 ಲಕ್ಷ ದಾಟಿವೆ ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 40ಲಕ್ಷ ವಾಹನಗಳು ಹೆಚ್ಚಳವಾಗಿದ್ದು, ವಾಯು ಮಾಲಿನ್ಯ ಮಿತಿ ಮೀರಿದೆ.

ವೈಟ್‍ಫೀಲ್ಡ್‍ನಲ್ಲಿ ಹೆಚ್ಚು: ವೈಟ್ ಫೀಲ್ಡ್ ಪ್ರದೇಶವೊಂದರಲ್ಲೇ 2005-05 ಪ್ರತಿ ಘನಮೀಟರ್‍ ಗೆ ಶೇ.91.8 ಮೈಕ್ರೋ ಆರ್‍ಎಸ್‍ಪಿಎಂ ಗ್ರಾಂ.ನಷ್ಟಿದ್ದ ಪ್ರಮಾಣ 2015-16ರಲ್ಲಿ ಶೇ.105ಕ್ಕೆ ಏರಿತ್ತು. ಪ್ರಸ್ತುತ ಮಾಲಿನ್ಯ ಪ್ರಮಾಣ ಶೇ.189ರಷ್ಟು ಇದೆ. ಇನ್ನೂ ಯಲಹಂಕ ಪ್ರದೇಶದಲ್ಲೂ ಸಹ 2005ರಲ್ಲಿ ಶೇ.57.6ರಷ್ಟಿದ್ದ, ಪ್ರಸ್ತುತ 109ಕ್ಕೆ ತಲುಪಿದೆ. ಇದೇ ರೀತಿಯ ಪ್ರಮಾಣ ಮುಂದುವರಿದರೆ ಐದಾರು ವರ್ಷದಲ್ಲಿ ದೆಹಲಿಯನ್ನೂ ಮೀರಿಸುವಂತಹ ವಾಯುಮಾಲಿನ್ಯದಲ್ಲೂ ಕಾಣಿಸಿಕೊಳ್ಳಬಹುದು.

ನಗರದಲ್ಲಿ ಎಗ್ಗಿಲ್ಲದೆ ವ್ಯಾಪಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣ ಶೇ.57 ರಷ್ಟು ಹೆಚ್ಚಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ಪೈಕಿ ವಾಯುಮಾಲಿನ್ಯ ಹೆಚ್ಚಳದಲ್ಲಿ ಬೆಂಗಳೂರು (140 ಮೈಕ್ರೋಗ್ರಾಂ ಪರ್ ಕ್ಯೂಬಿಕ್ ಮೀಟರ್) ಮೊದಲ ಸ್ಥಾನದಲ್ಲಿದ್ದರೆ, ವಿಜಯವಾಡ (100), ಹೈದರಾಬಾದ್ (98), ಚೆನ್ನೈ (59), ಕೊಯಮತ್ತೂರು (48) ಮಧುರೈ (45) ನಂತರದ ಸ್ಥಾನ ಪಡೆದುಕೊಂಡಿವೆ. ಇನ್ನು ನಗರದೊಳಕ್ಕೆ ಬಂದರೆ ವೈಟ್ ಫೀಲ್ಡ್ ಅತೀ ಹೆಚ್ಚು ವಾಯುಮಾಲಿನ್ಯ ಹೊಂದಿದೆ.

ಕ್ಯಾನ್ಸರ್ ಬರುವ ಆಪಾಯ: ನಂತರ ಆಮ್ಕೋ ಬ್ಯಾಟರೀಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ವಿಕ್ಟೋರಿಯಾ ರಸ್ತೆಯ ಡಿಟಿಡಿಸಿ ಹೌಸ್ ಪಡೆದುಕೊಂಡಿವೆ. ಕೊನೆಯ ಸ್ಥಾನದಲ್ಲಿ ಅಂದರೆ ಅತಿ ಕಡಿಮೆ ಮಾಲಿನ್ಯ ಹೊಂದಿರುವ ಪ್ರದೇಶದಲ್ಲಿ ಬಸವೇಶ್ವರನಗರ, ದೊಮ್ಮಲೂರು ಸಮಾನ ಸ್ಥಾನ ಪಡೆದಿವೆ. ಮನೆಯೊಳಗಿದ್ದುಕೊಂಡು ಕೆಟ್ಟ ಗಾಳಿ ಸೇವಿಸಿ ಸತ್ತವರ ಸಂಖ್ಯೆ ಶೇ. 4.3 ರಷ್ಟಿದ್ದರೆ, ಮನೆಯ ಹೊರಗಿದ್ದು ಸತ್ತವರ ಸಂಖ್ಯೆ 3.7 ರಷ್ಟಿದೆ. ಹೆಚ್ಚುತ್ತಿರುವ ಮಾಲಿನ್ಯದಿಂದ ಕ್ಯಾನ್ಸರ್, ಪಾಶ್ರ್ವವಾಯು, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಬಾಧಿಸುತ್ತವೆ. ಈ ಕಾಯಿಲೆಗಳ ನಿಯಂತ್ರಣಕ್ಕೆ ಹಣ್ಣು, ತರಕಾರಿ, ಬೆಣ್ಣೆ, ಮೊಸರು, ಮೀನು, ಉಪ್ಪಿನಕಾಯಿ, ವೈನ್ ಸೇವಿಸಬೇಕು. ಎಣ್ಣೆ ವಿಧದಲ್ಲಿ ಆಲೀವ್ ಎಣ್ಣೆ, ತೆಂಗಿನ ಎಣ್ಣೆ ಸೇವಿಸಬಹುದು ಎಂದು ವರದಿ ತಿಳಿಸಿದೆ.

 

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ