ಸಾವಿನಲ್ಲಿ ರಾಜಕೀಯ ಮಾಡುವವರು ನಾವಲ್ಲ..?

Kannada News

02-09-2017

ಚಿತ್ರದುರ್ಗ: ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ತಿರುಗೇಟು ನೀಡಿದ್ದಾರೆ. ಆರ್.ಬಿ.ತಿಮ್ಮಪುರ್ ವಿಚಾರ ಚುನಾವಣಾ ಆಯೋಗ ವಿಚಾರಣೆಯನ್ನು ಮಾಡುತ್ತೆ. ಒಬ್ಬರಿಗೆ ಎರಡು ವಿಳಾಸ ಅಂತ ಇದೆ, ಹಾಗಾಗಿ ಅವರು ಎರಡು ವಿಳಾಸ ನೀಡಿದ್ದಾರೆ, ಅವರು ಭತ್ಯೆ ಪಡೆದಿರೋದು ಸತ್ಯವಾಗಿದ್ರೆ ವಾಪಾಸು ಮಾಡುತ್ತಾರೆ ಎಂದರು. ಅದು ಹಗರಣವು ಅಲ್ಲ, ಅಪಾದನೆಯು ಅಲ್ಲ, ಒಬ್ಬ ದಲಿತ ಮಂತ್ರಿಯಾಗಿರೋದು ಅವರಿಗೆ ಸಹಿಲಾಗಿಲ್ಲ  ಹಾಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಪಕ್ಷದಲ್ಲಿ ಯಾವ ಭಿನ್ನಮತಗಳಿಲ್ಲ, ನಿನ್ನೆ ಕೆಲವು ಸಚಿವರು ಅವರವರ ಕಾರ್ಯಕ್ರಮದಲ್ಲಿದ್ರು, ಹಾಗಾಗಿ ಬರೋದಕ್ಕೆ ಆಗಿಲ್ಲ ಎಂದು ಹೆಸರು ಹೇಳದೆಯೇ ಪರಮೇಶ್ವರ್ ಅವರ ವಿಚಾರ ಪ್ರಸ್ತಾಪಿಸಿದರು. ನಾವೆಲ್ಲಾ ಒಟ್ಟಾಗಿ ಇದ್ದೇವೆ. ಸಿ.ಎಂ.ಸಿದ್ದರಾಮಯ್ಯ ಮತ್ತು  ಪರಮೇಶ್ವರ್ ರವರ ನಾಯಕತ್ವದಲ್ಲಿ ಚುನಾವಣೆಗೆ ಹೋಗ್ತೆವೆ. ಯಾರು ಏನೇ ಹೇಳಿದ್ರು ಜನ ನಮ್ಮ ಪರ ಇದ್ದಾರೆ ಎಂದರು. ನಾಡಿನ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಯೋಜನೆ ಪರಿಣಾಮವಾಗಿ ಜನರಿಗೆ ತಲುಪಿದೆ ಎಂದು ಹೇಳಿದರು.

ಇನ್ನು ಮಾದಾರ ಚೆನ್ನಯ್ಯ ಶ್ರೀಗಳು ರಾಜಕೀಯ ಎಂಟ್ರಿಯಾಗೋದು ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಅವರು ಧಾರ್ಮಿಕ ವಿಚಾರದಲ್ಲಿ ತೊಡಗಿದ್ದಾರೆ ಎಂದರು. ಬಿಜೆಪಿಗೆ ಕರಾಳ ದಿನ ವಾದ್ರೆ ನಮಗೆ ಸಂತೋಷದ ದಿನ, ಅವರಿಗೆ ಮರಣದ ದಿನವಾದ್ರೂ ನಮಗೆ ಇದು ಹಬ್ಬದ ದಿನ. ಅವರು ಕರಾಳ ದಿನ ವಾದ್ರು ಅಂದುಕೊಳ್ಳಲಿ, ಮರಣ ದಿನವಾದ್ರು ಅಂದುಕೊಳ್ಳಲಿ.  ನನ್ನ ಆಯಸ್ಸನ್ನು ಬೇಕಾದ್ರೂ ಅವರಿಗೆ ನೀಡುತ್ತೇನೆ, ಸಾವಿನಲ್ಲಿ ರಾಜಕೀಯ ಮಾಡುವವರು ನಾವಲ್ಲ ಎಂದು ತಿರುಗೇಟು ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ