ನಮ್ಮ ನಾಯಕರ ನಡುವೆ ಮನಸ್ತಾಪವಿಲ್ಲ..?

Kannada News

02-09-2017

ಹುಬ್ಬಳ್ಳಿ: ನಮ್ಮ ನಾಯಕರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ನಡುವಿನ ವಿಚಾರಕ್ಕೆ ಸಂಬಂಧಿಸಿದಂತೆ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿಯಲ್ಲಿ ಮಾತನಾಡಿ, ನಮ್ಮ ನಾಯಕರ ನಡುವೆ ಯಾವುದೇ ಮನಸ್ತಾಪವಿಲ್ಲ, ಪತ್ರಿಕೆಯಲ್ಲಿ ಈ ರೀತಿ ಬಿಂಬಿಸ್ತಾ ಇದ್ದಾರೆ, ಯಾವುದೇ ಮುನಿಸು ಮನಸ್ತಾಪವಿಲ್ಲ ಎಂದರು. ಮೊನ್ನೆ ಹುಬ್ಬಳ್ಳಿಗೆ ಬಂದಾಗ ನಾವು ಅಣ್ಣ-ತಮ್ಮಂದಿರ ಹಾಗೇ ಇದ್ದುಕೊಂಡು ಮತ್ತೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದಿದ್ದಾರೆ. ಹೀಗಿರುವಾಗ ವಿನಾಕಾರಣ ಇದನ್ನು ಬಿಂಬಿಸುವ ಕೆಲಸ ನಡಿತಿದೆ ಎಂದು ಆರೋಪಿಸಿದರು. ನೂರಕ್ಕೇ ನೂರರಷ್ಟು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ