ಮಚ್ಚಿನಿಂದ ಕೊಚ್ಚಿ ಪತ್ನಿ ಕೊಲೆ !

Kannada News

02-09-2017

ಕೋಲಾರ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ, ಪತಿ ಕೊಲೆಗೈದಿದ್ದಾನೆ. ಕೋಲಾರದ ಮಾಲೂರು ತಾಲ್ಲೂಕಿನ ದೊಡ್ಡಕಡತೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಂಜುಳ (35) ಕೊಲೆಯಾದ ದುರ್ದೈವಿ. ಪತಿಯಾದ ವಿಜಯ್ ತನ್ನ ಪತ್ನಿ ಮಂಜುಳ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕತ್ತು ಸೀಳಿದ್ದರಿಂದ ಮಂಜುಳ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾರೆ. ಆರೋಪಿ ವಿಜಯ್ ಕುಮಾರ್ ನನ್ನು ಬಂಧಿಸಿರುವ ಮಾಲೂರು ಪೊಲೀಸರು. ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ