ಮಹಿಳೆಯರಿಗೆ ವಂಚನೆ:ಆರೋಪಿ ಬಂಧನ !

Kannada News

02-09-2017

ಮಂಡ್ಯ: ಮಹಿಳೆಯರನ್ನ ನಂಬಿಸಿ, ವಂಚನೆ ಮಾಡುತ್ತಿದ್ದ ಆರೋಪಿಯನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ. ವಿಶ್ವನಾಥ್(65) ಬಂಧಿತ ಆರೋಪಿ. ಈತ ಮೂಲತಃ ತುಮಕೂರಿನ ಹಿತ್ತಲಪುರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಬಂಧಿತನಿಂದ 2 ಲಕ್ಷ ಮೌಲ್ಯದ 75 ಗ್ರಾಂ. ಚಿನ್ನ, 110 ಗ್ರಾಂ. ಬೆಳ್ಳಿ, 8 ಮೊಬೈಲ್ ಮತ್ತು ಪ್ರಕರಣಕ್ಕೆ ಬಳಸುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿ, ಮಾತಿನಲ್ಲೇ ಯಾಮಾರಿಸಿ, ಅವರನ್ನು ನಂಬಿಸಿ ಚಿನ್ನಾಭಣ ದೋಚಿ ಪರಾರಿಯಾಗುತ್ತಿದ್ದ. ಆರೋಪಿ ಬಂಧನದಿಂದ ಮಂಡ್ಯದಲ್ಲಿ 7, ಬೆಂಗಳೂರಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ ಎಂದು ಮಂಡ್ಯ ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ