ಭಾರೀ ಮಳೆ: ಬ್ಯಾರೇಜುಗಳು ಮುಳುಗಡೆ !

Kannada News

02-09-2017

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ, ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗೋವಿಂದಪುರ-ಭಂಡಾರಕವಟೆ, ಉಮಾರಾಣಿ-ಲವಗಿ ಸೇರಿ ರಾಜ್ಯ ವ್ಯಾಪ್ತಿಯ ಬ್ಯಾರೇಜುಗಳು ಮುಳುಗಡೆಯಾಗಿದ್ದು, ಮಹಾರಾಷ್ಟ್ರದೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿಗೆ ಏಕಾಏಕಿ ನೀರು ಹರಿದು ಬಂದಿದೆ. ಈ ಕುರಿತು ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದಿದ್ದು, ರೈತರ ಪಂಪ್ ಸೆಟ್ ಗಳು ನೀರುಪಾಲಾಗಿವೆ. ಘಟನೆಯಿಂದ ಕಂಗಾಲಾಗಿರುವ ರೈತರು, ವಿಜಯಪುರ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ