ಸಿಗರೇಟ್ ನಿಂದ ಸುಟ್ಟು ಪತ್ನಿಗೆ ಚಿತ್ರಹಿಂಸೆ !

Kannada News

02-09-2017 443

ಬೆಳಗಾವಿ: ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ತನ್ನ ಪತ್ನಿಗೆ, ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು ವಿಕೃತಿ ಮರೆದಿದ್ದಾನೆ. ಘಟನೆಯು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಾಬಂದರ್ ಗ್ರಾಮದ ನಿವಾಸಿಯಾದ, ಕಾವೇರಿ ವಾಲಿ (20) ನೊಂದ ಮಹಿಳೆ.  ಈಕೆಯ ಪತಿಯಾದ ಅರ್ಜುನ್ ಬಾಗರಾಯ್ ಈ ದುಷ್ಕೃತ್ಯ ಎಸಗಿದ್ದಾನೆ. ಬೆಂಗಳೂರಿನ ಲೋಕಾಯುಕ್ತ ಕಚೇರಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಜು‌ನ್, ಮೂಲತಃ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿ. ಕಾವೇರಿ ಮತ್ತು ಅರ್ಜುನ ದಂಪತಿ ಕಳೆದ 6 ತಿಂಗಳಿಂದ ಬೆಂಗಳೂರಿಲ್ಲಿ ನೆಲೆಸಿದ್ದರು, ಈ ವೇಳೆ ನಿತ್ಯವು ಮದ್ಯದ ಅಮಲಿನಲ್ಲಿ ಬಂದು ಹಿಂಸೆ ನೀಡುತ್ತಿದ್ದನು. ಇವನ ವಿಕೃತ ಹೆಚ್ಚಾಗಿದ್ದು, ಪತ್ನಿಯ ತಲೆ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಮಾಡಿ ನಡೆಸಿ ಚಿತ್ರಹಿಂಸೆ ನೀಡಿರುವುದು ಕೂಡ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯವು ಹಿಂಸೆ ನೀಡುತ್ತಿದ್ದನು ಎಂದು ನೊಂದ ಪತ್ನಿ ಆರೋಪಿಸಿದ್ದಾರೆ. ಇನ್ನು ಈ ಕುರಿತು ಪತಿಯ ವಿರುದ್ಧ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ಕಾವೇರಿ ವಾಲಿ ದೂರು ದಾಖಲಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ