ಆರ್ಥಿಕ ನಿರ್ವಹಣೆ: ಕೇಂದ್ರ ಸರ್ಕಾರ ವಿಫಲ

Kannada News

01-09-2017

ಬೆಂಗಳೂರು: ರಾಜ್ಯದ ನಾಲ್ಕು ಕಡೆ 3596 ಕೋಟಿ ರೂ. ವೆಚ್ಚದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಪ್ರಮುಖ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಸುದ್ದಿಗೋಷ್ಟಿಯಲ್ಲಿಂದು ಭಾರೀ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.  ನಂಜನಗೂಡಿನಲ್ಲಿ ಟಿವಿಎಸ್ ಸಂಸ್ಥೆಯ ವಿಸ್ತರಣಾ ಘಟಕದಿಂದ 1110 ಕೋಟಿ ರೂ ಬಂಡವಾಳದ ಘಟಕ ಸ್ಥಾಪನೆ, ಹರಿಹರ ಬಳಿ ಎಂಆರ್‍ಪಿಎಲ್‍ನ 966 ಕೋಟಿ ರೂ. ವೆಚ್ಚದ ಘಟಕ ಸ್ಥಾಪನೆ, ಶಿವಮೊಗ್ಗದಲ್ಲಿ ಶಾಹಿ ಎಕ್ಸ್‍  ಪೋರ್ಟ್ ಘಟಕದಿಂದ 710 ಕೋಟಿ ರೂ. ಹಾಗೂ ಐಕ್ಯತಾ ಪೀಠೋಪಕರಣ ಘಟಕ ಬೆಂಗಳೂರಿನಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಯಿತು ಎಂದರು. ಈ ಒಟ್ಟು ನಾಲ್ಕು ಕಂಪನಿಗಳಿಂದ 3842 ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಸಚಿವ ದೇಶಪಾಂಡೆ ಅಂಕಿ-ಅಂಶ ನೀಡಿದರು.

ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕೆ ನೋಟು ಅಮಾನ್ಯೀಕರಣದಿಂದ, ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಠಿಯಲ್ಲಿ ಗಣನೀಯ ಕುಸಿತ ಉಂಟಾಗಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯಸಭೆಯಲ್ಲಿ ಸ್ಪಷ್ಟ ಪಡಿಸಿದಂತೆ ದೇಶದ ಆರ್ಥಿಕ ಬೆಳವಣಿಗೆ 5.7ಕ್ಕೆ ಕುಸಿದಿರುವ ಬಗ್ಗೆ ಹಣಕಾಸು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿರುವ ಪ್ರಧಾನಮಂತ್ರಿ ಅವರು, ಅದನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ ನೋಟುಗಳ ಅಮಾನ್ಯೀಕರಣದಿಂದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು, ಇದರಿಂದ ಆರ್ಥಿಕ ಬೆಳವಣಿಗೆ ಕುಸಿತವಾಗಲಿದೆ ಎಂದು ಅನೇಕ ಆರ್ಥಿಕ ತಜ್ಞರು ವ್ಯಾಖ್ಯಾನಿಸಿದ್ದನ್ನು ಉಲ್ಲೇಖಿಸಿ, ಆರ್ಥಿಕ ನಿರ್ವಹಣೆಯಲ್ಲಿ ಎನ್‍ಡಿಎ ಸರ್ಕಾರ ವಿಫಲವಾಗಿದೆ ಎಂದರು.

ದೇಶದಲ್ಲಿ ಕಪ್ಪುಹಣ ಪತ್ತೆ ಮಾಡುವುದರ ಜೊತೆಗೆ ಭಯೋತ್ಪಾದಕರಿಗೆ ಹಣ ದೊರೆಯದಂತೆ ಮಾಡುವ ಕೇಂದ್ರ ಸರ್ಕಾರ ವಿಫಲ, ಆರ್.ಬಿ.ಐ  ತಿಳಿಸಿರುವಂತೆ ಎಲ್ಲಾ ಹಣವೂ ಬ್ಯಾಂಕಿಗೆ ಪಾವತಿಯಾಗಿದೆ, ಆರ್.ಬಿ.ಐ  ಮಾಹಿತಿಯಂತೆ ದೇಶದಲ್ಲಿ ಕಪ್ಪುಹಣ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಂಕಿ-ಅಂಶ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ