ಸಂಪುಟ ವಿಸ್ತರಣೆ: ಪರಮೇಶ್ವರ್ ಅಸಮಾಧಾನ..?

Kannada News

01-09-2017

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಡಾ: ಜಿ. ಪರಮೇಶ್ವರ್ ಗೈರು ಹಾಜರಾಗಿದ್ದರು. ಪರಮೇಶ್ವರ್ ಅವರು ತಮ್ಮ ಜಿಲ್ಲೆಯ ಷಡಕ್ಷರಿ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದರು. ಆದರೆ ಮುಖ್ಯಮಂತ್ರಿ ಅವರು ತಮ್ಮ ಜಿಲ್ಲೆಯ, ತಮ್ಮ ಆಪ್ತರಾಗಿದ್ದ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಗೆ ಅವಕಾಶ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಇದಲ್ಲದೇ ದಲಿತ ಸಮುದಾಯದ ಬಲ ಪಂಥಕ್ಕೆ ಅವಕಾಶ ನೀಡುವಂತೆಯೂ ಪರಮೇಶ್ವರ್ ಒತ್ತಡ ತಂದಿದ್ದರು. ಆದರೆ ಎಡಗೈ ಸಮುದಾಯದ ಆರ್.ಬಿ. ತಿಮ್ಮಾಪುರ್ ಅವರಿಗೆ ಅವಕಾಶ ನೀಡಿದ್ದರಿಂದಲೂ ಬೇಸರಗೊಂಡಿದ್ದು, ಈ ಎಲ್ಲಾ ಬೆಳವಣಿಗೆಗಳಿಂದ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ