ಆಟೋ ಡಿಕ್ಕಿ: ವ್ಯಕ್ತಿ ದುರ್ಮರಣ !

Kannada News

01-09-2017

ಬೆಂಗಳೂರು: ರಾಜಾಜಿನಗರದ ಬಾಷ್ಯಂ ವೃತ್ತದ ಬಳಿ ಆಟೋ ಡಿಕ್ಕಿ ಹೊಡೆದು, ರಸ್ತೆ ದಾಟುತ್ತಿದ್ದ ನಿವೃತ್ತ ಪ್ರಥಮ ದರ್ಜೆ ಸಹಾಯಕ (ಎಫ್‍ಡಿಎ) ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪಟ್ಟೇಗಾರ್ ಪಾಳ್ಯದ ಶರಾವತಿ ನಗರದ ನಾಗರಾಜ್ (62)ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿ.ವಿ.ಪುರಂನ ಶಾಲೆಯೊಂದರಲ್ಲಿ ಎಫ್‍ಡಿಎ ಯಾಗಿ ನಿವೃತ್ತರಾಗಿದ್ದ ನಾಗರಾಜ್ ಅವರು ಭಾಷ್ಯಂ ವೃತ್ತದ ಸಹಕಾರ ಬಿಲ್ಡಿಂಗ್ ಬಳಿ ರಸ್ತೆ ದಾಟುತ್ತಿದ್ದಾಗ, ಆಟೋ ಡಿಕ್ಕಿ ಹೊಡೆದಿದೆ.ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಚಾಲಕ ಮನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದನಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಆಟೋ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇನ್ನೊಂದೆಡೆ ನಾಗರಭಾವಿ ರಿಂಗ್‍ರಸ್ತೆಯ ಸುರ್ವಣಲೇಔಟ್ ಜಂಕ್ಷನ್ ಬಳಿ, ಆಟೋ ನಿಲ್ಲಿಸಿ ಮೂತ್ರವಿಸರ್ಜನೆಗೆ ರಸ್ತೆ ದಾಟಿ ಹೋಗುತ್ತಿದ್ದಾಗ, ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಚಾಲಕ ದೀಪು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಚನ್ನರಾಯಪ್ಟಣ ಮೂಲದ ದೀಪು (27) ಪೀಣ್ಯಾದಲ್ಲಿ ವಾಸಿಸುತ್ತಿದ್ದ ದೀಪುನನ್ನು ಮೊದಲು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬೈಕ್ ಸವಾರ ನಾಯಂಡಹಳ್ಳಿಯ ಮುನಿರಾಜುನನ್ನು ಬಂಧಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ