ನಾನೂ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೆ..?

Kannada News

01-09-2017

ಮಂಡ್ಯ: ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ, ಮಂಡ್ಯದ ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿದ್ದು, ನಾನೂ ಸಚಿವ ಆಕಾಂಕ್ಷಿ ಆಗಿದ್ದು ನಿಜ ಎಂದು ಹೇಳಿದ್ದಾರೆ. ಆದರೆ ಇದು ಪಕ್ಷದ ತೀರ್ಮಾನ, ಸಿಎಂ ಅವರ ವಿವೇಚನೆಗೆ ಬಿಟ್ಟದ್ದು ಎಂದರು. ಪಕ್ಷದ ತೀರ್ಮಾನಕ್ಕೆ ಶಿಸ್ತಿನ ಸಿಪಾಯಿಯಾಗಿ ತಲೆಬಾಗಿ ಕೆಲಸ ಮಾಡ್ತೀನಿ, ನನ್ನ ಬಗ್ಗೆ ಭರವಸೆ ಇಟ್ಟು ಜವಾಬ್ದಾರಿ ಕೊಟ್ಟರೆ ನಿಭಾಯಿಸಲು ರೆಡಿ ಎಂದು, ಮತ್ತೊಮ್ಮೆ ತಾನೂ ಆಕಾಂಕ್ಷಿ ಎನ್ನುವ ಮಾತನ್ನು ನೆನಪಿಸಿದ್ದಾರೆ. ಇದು ಚುನಾವಣೆ ವರ್ಷ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ, ಪಕ್ಷ ಮತ್ತು ಸಿಎಂ ಸೂಕ್ತ ಸಂದರ್ಭದಲ್ಲಿ, ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ, ಎಂದು ಗೀತಾ ಮಹದೇವ್ ಪ್ರಸಾದ್ ಗೆ ಸಚಿವ ಸ್ಥಾನಕ್ಕೆ ಸಮರ್ಥನೆ ನೀಡಿದ್ದಾರೆ. ಇನ್ನು ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ವಿಚಾರ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು. ಇಲ್ಲಿ ಕಾಂಗ್ರೆಸ್ ಯಾರೊಬ್ಬನ ಸ್ವತ್ತೂ ಅಲ್ಲ, ಯಾರ ಗುಲಾಮ ಗಿರಿಯಲ್ಲೂ ಇಲ್ಲ, ಅವರ ಎಲ್ಲಾ ಹೇಳಿಕೆಗೂ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ