ದೇಶಕ್ಕೇ ಮಾದರಿಯಾದ ಗಣೇಶೋತ್ಸವ !

Kannada News

01-09-2017

ಮೈಸೂರು: ಒಂದು ಕಾಲದಲ್ಲಿ ಕೇವಲ ಕೋಮುಗಲಭೆಗಳಿಂದಲೇ ಸುದ್ದಿಯಾಗುತ್ತಿದ್ದ, ಮೈಸೂರಿನ ತಿಲಕ್ ನಗರದಲ್ಲೀಗ ಹಿಂದೂ-ಮುಸ್ಲಿಂ ಭಾಂಧವರ ನಡುವಿನ ಸಾಮರಸ್ಯ ದೇಶಕ್ಕೇ ಮಾದರಿಯಾಗಿದೆ. ಮೈಸೂರಿನಲ್ಲಿ ಸಹೋದರತ್ವ ಸಾರುವ ರೀತಿ ಗಣಪತಿ ಉತ್ಸವ ಆಚರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ತಿಲಕ್ ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿರುವ ಸಂಗತಿ ತಿಳಿದು ಬಂದಿದೆ. ಕಳೆದ ಆರು ವರ್ಷದಿಂದ ಹಿಂದೂ-ಮುಸ್ಲಿಂ ಭಾಂಧವರು ಗಣಪತಿ ಉತ್ಸವ ಆಚರಣೆ ಮಾಡುತ್ತಾ ಬಂದಿರುವುದು ಕೂಡ ಬೆಳಕಿಗೆ ಬಂದಿದೆ. ಸೈಕಲ್ ಮಜ್ಜ ಎಂಬುವರ ನೇತೃತ್ವದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಗಣೇಶೋತ್ಸವ ಆಚರಣೆ ಮಾಡುತ್ತಿರುದಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಮತ್ತು ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ