ತಿಮ್ಮಾಪುರ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ..?

Kannada News

01-09-2017 366

ಬಳ್ಳಾರಿ: ಬಾಗಲಕೋಟೆ ವಿಳಾಸ ನೀಡಿ. ಟಿಎ ಡಿಎ ಪಡೆಯುತ್ತಿರುವ ಆರ್.ಬಿ.ತಿಮ್ಮಾಪುರ ಅವರು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಲಿನ, ವಿಳಾಸ ನೀಡಿ, ಮತವನ್ನೂ ನೀಡಿ‌ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಅಂತಹವರಿಗೆ ಸಚಿವ ಸಂಪುಟಕ್ಕೆ ಬಂಢತನದಿಂದ ಸೇರಿಸಿಕೊಂಡರೆ ನ್ಯಾಯಾಲಯದ ಮೂಲಕ ಹೋರಾಟ ನಡೆಸಿ ಜೈಲಿಗೆ ಕಳಿಸಲಾಗುತ್ತದೆಂದು, ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿಂದು ಮತನಾಡಿದ ಅವರು, ಇದೇ ರೀತಿ ಕಾಂಗ್ರೆಸ್ ನ ಇನ್ನಿತರ 8 ಜನರು ಸಹ ಅಪಚಾರ ಮಾಡಿದ್ದಾರೆ ಅವರ ವಿರುದ್ದವೂ ಕ್ರಮ ಜರುಗ ಬೇಕಿದೆ ಎಂದರು. ರಾಜ್ಯಪಾಲರಿಗೂ ಅವರನ್ನು ಸಚಿವರನ್ನಾಗಿ ಮಾಡುವ ಪಟ್ಟಿಗೆ ಅನುಮೋದನೆ ಮಾಡಬಾರದೆಂದು ಮನವಿ‌ಮಾಡುವೆ ಎಂದರು. ಸೆಪ್ಟೆಂಬರ್ 4 ರಂದು ಬೆಂಗಳೂರಿನಲ್ಲಿ ಪಕ್ಷದ  ಚಿಂತನಾ ಸಭೆ ನಡೆಸಿ, ಪಕ್ಷವನ್ನು ಬರುವ ಚುನಾವಣೆಯಲ್ಲಿ ಗೆಲುವಿನ ತಂತ್ರಗಳ ಬಗ್ಗೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರಕ್ಕೆ ಕನ್ನಡದ ಬೆಳಗಾವಿ ಸೇರಿಸುವ ಬಗೆಗಿನ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕರು, ಸಚಿವರು ಹೆಬ್ಬಾಳ್ಕರ್ ಹೇಳಿಕೆಯನ್ನು ಖಂಡಿಸದೆ ಕನ್ನಡ ನಾಡಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಛೇಡಿಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ