ದುರ್ನಡತೆ: ಗ್ರಾಮ ಪಂಚಾಯತಿ ಅಧ್ಯಕ್ಷ ವಜಾ

Kannada News

01-09-2017

ಮಂಡ್ಯ: ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿಗೆ ಬಿಲ್ ನೀಡಲು ಲಂಚ ಪಡೆದ ಆರೋಪದ ಹಿನ್ನೆಲೆ, ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ವಜಾ ಮಾಡಲಾಗಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಹುಲಿಕೆರೆ ಗ್ರಾಮದ ಅಧ್ಯಕ್ಷನನ್ನು ವಜಾ ಮಾಡಿ, ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ. ಹುಲಿಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಂ.ಸಿದ್ದರಾಜು ವಜಾಗೊಂಡ ಅಧ್ಯಕ್ಷ. ಕಳದೆ 5/2/2016ರಂದು ಎರಡು ಸಾವಿರ ಲಂಚ ಪಡೆಯುವಾಗ, ಸಿದ್ದರಾಜು ಎಸಿಬಿ ಬಲೆಗೆ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48ರ ಉಪಪ್ರಕರಣ 4 ರ ಅನ್ವಯ ಸಿದ್ದರಾಜುವರನ್ನು, ದುರ್ನಡತೆ ಎಸಗಿರುವ ಆರೋಪದ ಮೇಲೆ ಅಧ್ಯಕ್ಷ ಸ್ಥಾನದಿಂದ ವಜಾಮಾಡಲಾಗಿದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ