ಅನುದಾನ ತಾರತಮ್ಯ: ಆಹೋರಾತ್ರಿ ಧರಣಿ !

Kannada News

01-09-2017 161

ಮಂಡ್ಯ: ಕಾಂಗ್ರೆಸ್ ನ ಜಿಲ್ಲಾ ಪಂಚಾಯತಿ ಸದಸ್ಯರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತರೆ ಸದಸ್ಯರು, ಮಂಡ್ಯ ಜಿಲ್ಲಾ ಪಂಚಾಯತಿ ಬಳಿ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಕಾಂಗ್ರೆಸ್ ನ 12 ಮಂದಿ ಸದಸ್ಯರು ಧರಣಿ ನಡಸಿ, ಕಾವೇರಿ ಸಭಾಂಗಣದಲ್ಲೇ ರಾತ್ರಿ ಕಳೆದಿದ್ದಾರೆ. ತಾರತಮ್ಯ ನಿವಾರಣೆ ಆಗೋವರೆಗೂ ಧರಣಿಯ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಧರಣಿಯಲ್ಲಿ 4 ಮಂದಿ ಮಹಿಳಾ ಸದಸ್ಯರು ಭಾಗಿಯಾಗಿದ್ದರು. ಆಡಳಿತ ಪಕ್ಷ ಜೆಡಿಎಸ್ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡಿದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಕೋಟಿ ಅನುದಾನ ವಿತರಣೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರಿಗೆ ಕೇವಲ 4 ರಿಂದ 7 ಲಕ್ಷ ಅನುದಾನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರೀತಿಯ ತಾರತಮ್ಯ ಖಂಡಿಸಿ ಧರಣಿ ನಡೆಸುತ್ತಿದ್ದೇವೆ ಎಂದು ತಿಳಿಸಿದ ಧರಣಿ ನಿರತರು, ಜಿಲ್ಲಾ ಉಸ್ತುವಾರಿ ಸಚಿವರು ಬರೋವರೆಗೂ ಧರಣಿ ಕೈ ಬಿಡದಿರಲು ನಿರ್ಧಾರ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ