ದಸರಾ ಗಜಪಡೆಗೆ ಭಾರ ಹೊರುವ ತಾಲೀಮು

Kannada News

01-09-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ, ಸೆಪ್ಟೆಂಬರ್ 30 ರಂದು ಜರುಗಲಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ಆನೆಗೆ, ಇಂದಿನಿಂದ ಭಾರ ಹೊತ್ತು ಸಾಗುವ ತಾಲೀಮು ಆರಂಭವಾಗಿದೆ. ಮೊದಲ ದಿನವಾದ ಇಂದು ಸುಮಾರು 400 ಕೆಜಿ ಭಾರ ಹೊತ್ತು ಸಾಗಿದ ಗಜಪಡೆಯ ಕ್ಯಾಪ್ಟನ್ ಅರ್ಜುನ, ಮೊದಲಿಗೆ ಅರ್ಜುನನ ಬೆನ್ನಿಗೆ ಗಾದಿ ತೊಟ್ಟಿಲು, ನಮ್ದಾ ಕಟ್ಟಿ, ಮರಳು ತುಂಬಿದ್ದ ಮೂಟೆಗಳ ಭಾರ ಹಾಕಿ ತಾಲೀಮು ನಡೆಸಿದೆ. ಬಳಿಕ ತನ್ನ ಹೆಗಲ ಮೇಲೆ ಸುಮಾರು 400 ಕೆಜಿ ಭಾರ ಹೊತ್ತ ಅಂಬಾರಿ ಆನೆ ಅರ್ಜುನನಿಗೆ, ಎರಡನೇ ಹಂತದ ತಾಲೀಮು ಆರಂಭಿಸಿದ್ದಾರೆ. ಜಂಬೂ ಸವಾರಿ ಮೆರವಣಿಗೆಯ ದಿನ ಅರ್ಜುನನ ಎಡ ಬಲದಲ್ಲಿ ಸಾಗಲಿರುವ ಕುಮ್ಕಿ ಆನೆಗಳಾದ ವರಲಕ್ಷ್ಮಿ ಹಾಗೂ ಕಾವೇರಿ ಕೂಡ ಇಂದಿನ ತಾಲೀಮಿಗೆ ಸಾಥ್ ನೀಡಲಿದ್ದಾರೆ. ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳಿಗೆ ಭಾರ ಹೊರುವ ತಾಲೀಮಿನ ಮೂಲಕ ಎರಡನೇ ಹಂತದ ತಾಲೀಮು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಭಾರ ಹೊತ್ತು ಸಾಗಲಿರುವ ಅರ್ಜುನ, ಜೊತೆಗೆ ಬಲರಾಮ, ಗಜೇಂದ್ರ, ಅಭಿಮನ್ಯು ಆನೆಗಳಿಗೂ ಭಾರ ಹೊತ್ತು ಸಾಗುವ ತಾಲೀಮು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ