ಗಣೇಶ ವಿಸರ್ಜನೆ: ಕಾಲು ಜಾರಿ ವ್ಯಕ್ತಿ ಸಾವು !

Kannada News

01-09-2017

ಬಾಗಲಕೋಟೆ: ಗಣೇಶನ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಕಾಲು ಜಾರಿ‌ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲಕ್ಷಾನಟ್ಟಿ ಗ್ರಾಮದಲ್ಲಿ ನಡೆದಿದೆ. ಜ್ಞಾನೇಶ್ (25) ಮೃತ ದುರ್ದೈವಿ. ಘಟಪ್ರಭಾ ನದಿಯಲ್ಲಿ ಜ್ಞಾನೇಶ ಗೆಳೆಯರೊಂದಿಗೆ ಗಣೇಶ ವಿಸರ್ಜನೆ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಘಟನೆ ನಡೆದು 4-5 ಗಂಟೆಗಳ ಕಾಲ ಮೃತ ದೇಹ ಪತ್ತೆಯಾಗದಿದ್ದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ, ಅಗ್ನಿಶಾಮಕ ಸಿಬ್ಬಂದಿ ಹಾಗೂ ನುರಿತ ಈಜುಗಾರರಿಂದ, ಮೃತ ಜ್ಞಾನೇಶನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ