ಹಾಸ್ಟೆಲ್ ಅವ್ಯವಸ್ಥೆ: ವಿದ್ಯಾರ್ಥಿನಿಯರ ಪ್ರತಿಭಟನೆ

Kannada News

31-08-2017

ಹಾಸನ: ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಪ್ರತಿಭಟಿಸಿದ್ದಕ್ಕೆ ಅಧಿಕಾರಿಗಳು ಕೆಲ ವಿದ್ಯಾರ್ಥಿನಿಯರನ್ನು ಹೊರಹಾಕುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿ ಬಾಲಕಿಯರ ಹಾಸ್ಟೆಲ್ ನಿವಾಸಿಗಳು ಕಳೆದ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.

ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ, ವಿದ್ಯಾರ್ಥಿನಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಈ ಹಾಸ್ಟೆಲ್ ನಲ್ಲಿ  ಕಳೆದ ತಿಂಗಳು ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ವಾರ್ಡನ್ ಸುಮಾ ಎಂಬುವರನ್ನ ಬೇರೆಡೆಗೆ ವರ್ಗ ಮಾಡಲಾಗಿತ್ತು.

ಅದಾದ ಬಳಿಕವೂ ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಆಶಾ ಸೇರಿದಂತೆ ಕೆಲವರನ್ನು ಹಾಸ್ಟೆಲ್ ನಿಂದ ಹೊರಹಾಕಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ನಮ್ಮಲ್ಲಿಯೇ ಕೆಲ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.  ಈ ವೇಳೆ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ್ ರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿ ವಿದ್ಯಾರ್ಥಿನಿಯರ ನಡುವೆ ಪರಸ್ಪರ ವಾಗ್ವಾದವೂ ನಡೆಯಿತು. ಕೊನೆಗೆ ಯಾರನ್ನೂ ಹಾಸ್ಟೆಲ್ ನಿಂದ ಹೊರಹಾಕುವ ನಿರ್ಧಾರ ಮಾಡಿಲ್ಲ, ಪರಿಶೀಲನೆ ಸೂಚಿಸಲಾಗಿದೆ ಅಷ್ಟೇ‌ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ