ಮಹಿಳೆ ಅನುಮಾನಾಸ್ಪದ ಸಾವು !

Kannada News

31-08-2017

ಹಾಸನ: ವಿವಾಹಿತ ಮಹಿಳೆಯೊಬ್ಬರು, ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯು, ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಅರಸೀಕೆರೆ ತಾಲ್ಲೂಕು ಕೆ.ಬರಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವೀಣಾ (28) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆ ಯಾಗಿದೆ. 7ವರ್ಷದ ಹಿಂದೆ ಧರ್ಮಶೇಖರ್ ಎಂಬಾತ ನೊಂದಿಗೆ ವೀಣಾ ಅವರ ಮದುವೆಯಾಗಿತ್ತು, ಗಂಡನೇ ಹೊಡೆದು ಸಾಯಿಸಿದ್ದಾನೆ ಎಂದು ಮೃತ ವೀಣಾ  ಪೋಷಕರ ಆರೋಪಿಸಿದ್ದಾರೆ. ಅರಸೀಕೆರೆ ತಾಲ್ಲೂಕಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಹಾಸನ ಮಹಿಳೆ ಅನುಮಾನಾಸ್ಪದ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ