ಮೈಸೂರು ದಸರಾ: ಭದ್ರತಾ ಕ್ರಮಗಳ ಚರ್ಚೆ !

Kannada News

31-08-2017

ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕೇವಲ 21 ದಿನಗಳು ಮಾತ್ರ ಬಾಕಿಯಿರುವ ಹಿನ್ನೆಲೆ, ಮೈಸೂರು ಅರಮನೆ ಆವರಣದಲ್ಲಿ ಕೈಗೊಳ್ಳಬೇಕಾದ ಭದ್ರತೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪರಾಮರ್ಶೆ ನಡೆಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಷ್ಣುವರ್ಧನ್, ಅರಮನೆ ಮಂಡಳಿ ಭದ್ರತಾ ಅಧಿಕಾರಿಗಳಿಂದ ಅರಮನೆಯ ಆವರಣದಲ್ಲಿ ಪರಿಶೀಲನೆ ನಡೆಸಿದರು. ದಸರಾ ಮಹೋತ್ಸವ ಉದ್ಘಾಟನೆಯ ದಿನದಿಂದ, ಜಂಬೂಸವಾರಿ ಮೆರವಣಿಗೆ ಅಂತ್ಯಗೊಳ್ಳುವವರೆಗೂ ಅರಮನೆ ಆವರಣದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ