ಕಾಂಗ್ರೆಸ್ಸಿಗರಿಂದ ಹೆಚ್.ಆಂಜನೇಯ ಪ್ರತಿಕೃತಿ ದಹನ

Kannada News

31-08-2017

ಚಿತ್ರದುರ್ಗ: ಹೊಳಲ್ಕೆರೆಯ ಮಾಜಿ ಶಾಸಕ ಎ.ವಿ.ಉಮಾಪತಿ ಅವರನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು ಅವಮಾನಿಸಿದ್ದಾರೆ ಎಂದು ಆರೋಪಿಸಿ, ಚಿತ್ರದುರ್ಗದಲ್ಲಿಂದು ಎ.ವಿ.ಉಮಾಪತಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯಾದವ ಸಮೂದಾಯದವರಿಂದ ಸಚಿವ ಆಂಜನೇಯ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನಿಸಿದ್ದಾರೆ. ಸಚಿವ ಆಂಜನೇಯ ವಿರುದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಜೆ.ಜೆ. ಹಟ್ಟಿ, ಬಿ.ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು. ಮಾಜಿ ಎಂ.ಎಲ್.ಎ ಉಮಾಪತಿ ಅವರನ್ನು ಕಳೆದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಿಂದ ಕೆಳಗಿಸಿ ಹೊರಗೆ ಹೋಗುವಂತೆ ಹೇಳಿದ್ದ, ಹಿನ್ನೆಲೆಯಲ್ಲಿ ಇಂದು ಉಮಾಪತಿ ಬೆಂಬಲಿಗರು, ಯಾದವ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಅವಮಾನಿಸಿದ ಆಂಜನೇಯ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ