ಕೊಲೆ ಮಾಡಿ ಕ್ಷಮೆ ಕೇಳಿದರೆ ಅರ್ಥವಿಲ್ಲ..?

Kannada News

31-08-2017

ಬೆಂಗಳೂರು: ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಆವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಸಂಸದೆ ಶೋಭಾ ಕರಂದ್ಲಾಜೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಕಿಡಿಕಾರಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಚುನಾವಣೆ ವೇಳೆಯಲ್ಲಿ ಮಾತ್ರ ಕನ್ನಡ ಪ್ರೀತಿ ತೋರಿಸ್ತಾರೆ, ಧ್ಚಜದ ವಿಚಾರದಲ್ಲಿ ಆಗಿರಬಹುದು, ಹಿಂದೆ ಹೇರಿಕೆ ಆಗಿರಬಹುದು, ಈ ವಿಚಾರಗಳಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ರು, ಆದ್ರೆ ಸಿದ್ದರಾಮಯ್ಯ ಅವರೇ ನಿಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯ ಹೇಳಿಕೆಯ ಬಗ್ಗೆ ನಿಮ್ಮ‌ ನಿಲುವು ಏನು..? ಎಂದು ಪ್ರಶ್ನಿಸಿದ್ದಾರೆ. ಕನ್ನಡಿಗರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಛೂ ಬಿಟ್ಟಿದ್ದಾರೆ ಸಿಎಂ ಎಂದು ಆಕ್ರೋಶದಿಂದ ನುಡಿದರು. 

ಹಿಂದಿ ಹೇರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದರೂ. ಹಾಗೇ ನಾಡಧ್ವಜದ ಬಗ್ಗೆಯೂ ಚುನಾವಣೆ ಬರುತ್ತಿದ್ದಂತೆ ಮಾತಾಡಿದ್ರು, ಆದರೆ ಭಾಷೆ ಹಾಗೂ ಧ್ವಜದ ಬಗ್ಗೆ ಗೊಂದಲ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯರ ಪಕ್ಷದ ಲಕ್ಷ್ಮೀ ಹೆಬ್ಬಾಳ್ಕರ್, ಮಹಾರಾಷ್ಟ್ರದ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿ ಕನ್ನಡ ನಾಡಿನ ಬಗ್ಗೆ, ಕನ್ನಡ ಭಾಷೆ ಬಗ್ಗೆ ಗೌರವವಿದ್ರೆ ತಕ್ಷಣ ಅವರನ್ನು ಪಕ್ಷದಿಂದ 6 ವರ್ಷಗಳ ವರೆಗೆ ಉಚ್ಛಾಟಿಸಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು, ಪರಮೇಶ್ವರ್ ಹಾಗು ಸಿಎಂ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ರೆ ಕನ್ನಡ ನಾಡಧ್ವಜ ಹಾಗೂ ಭಾಷೆ ಬಗ್ಗೆ ಮಾತನಾಡುವ ನೈತಿಕತೆ ಇಬ್ಬರಿಗೂ ಇಲ್ಲ ಎಂದಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ, ಕನ್ನಡ ಧ್ವಜಕ್ಕಾಗಿ ಮೊಸಳೆ ಕಣ್ಣೀರು ನಮಗೆ ಬೇಡ, ಈಗಾಗಲೇ ಕನ್ನಡಕ್ಕೆ ಧ್ವಜವಿದೆ, ನಾಡಗೀತೆಯಿದೆ ಆದರೆ ಇವುಗಳಲ್ಲಿ ಗೊಂದಲ ಸೃಷ್ಟಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆಯಾಚನೆ ವಿಚಾರದ ಕುರಿತು ಮಾತನಾಡಿ, ಕೊಲೆ ಮಾಡಿ ಅದಕ್ಕೆ ಕ್ಷಮೆ ಕೇಳಿದ್ರೆ ಅರ್ಥವಿಲ್ಲ, ಮೊದಲು ಶಿಕ್ಷೆ ಆಗಲಿ, ಆಮೇಲೆ ಕ್ಷಮೆಯ ವಿಚಾರ ಬರಲಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ