ಪ್ರೇಮ ಪ್ರಕರಣ: ಯುವಕ ಆತ್ಮಹತ್ಯೆ !

Kannada News

31-08-2017

ಕೊಪ್ಪಳ: ಅಪ್ರಾಪ್ತೆಯನ್ನು ಪ್ರೀತಿಸಿದ್ದ ಯುವಕನ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಘಟನೆಯು ಕೊಪ್ಪಳದಲ್ಲಿ ನಡೆದಿದ್ದು, ಅಪ್ರಾಪ್ತಳನ್ನು ಪ್ರೀತಿಸಿದ್ದ ಬಸವರಾಜ ಉಪ್ಪಾರ(24) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕೊಪ್ಪಳದ ಗಂಗಾವತಿ ತಾಲ್ಲೂಕಿನ ಗುಂಡೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ 17 ವರ್ಷದ ಅಪ್ರಾಪ್ತೆಯನ್ನು ಯುವಕ ಇಷ್ಟಪಟ್ಟಿದ್ದ, ಇನ್ನು ಇವರಿಬ್ಬರ ಪ್ರೀತಿಯ ವಿಷಯ ಮನೆಯಲ್ಲಿ ತಿಳಿದು ಹುಡುಗನ ಮನೆಯವರು ಮದುವೆಗೆ ಅಡ್ಡಿಪಡಿಸಿದ್ದರು. ಆದರೆ ಮದುವೆ ಆಗದಿದ್ರೆ ಪೋಸ್ಕೋ ಕಾಯ್ದೆಯಡಿ ಜೈಲಿಗೆ ಕಳಿಸುತ್ತೇವೆ ಎಂದು ಯುವತಿ ಮನೆಯವರು ಬೆದರಿಕೆ ಹಾಕಿದ್ದಾರೆ. ಇದೇ ವಿಷಯಕ್ಕೆ ನಿನ್ನೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯ್ತಿ ಕೂಡ ನಡೆದಿತ್ತು. ಆದರೆ ಇದರಿಂದ ಆತಂಕಗೊಂಡ ಯುವಕ ಗ್ರಾಮದ ಹೊರ ಹೊಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ-ಯುವತಿ ಇಬ್ಬರು ಒಂದೇ ಜಾತಿ ಮತ್ತು ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಗಂಗಾವತಿಯ ಕಾರಟಗಿ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ