ಲಾರಿ ಡಿಕ್ಕಿ ಇಬ್ಬರ ದುರ್ಮರಣ !

Kannada News

30-08-2017

ಬೆಂಗಳೂರು: ಲಾರಿ ಡಿಕ್ಕಿ ಹೊಡೆದು ಸಂಭವಿಸಿದ 2 ಪ್ರತ್ಯೇಕ ರಸ್ತೆ  ಅಪಘಾತಗಳಲ್ಲಿ ಇಬ್ಬರು ಸ್ಕೂಟರ್ ಸವಾರರು ಮೃತಪಟ್ಟಿರುವ ದುರ್ಘಟನೆ ಹುಳಿಮಾವುವಿನ ಕೋಳಿಫಾರಂ ಗೇಟ್ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.

ಕೋಳಿಫಾರಂ ಗೇಟ್ ಬಳಿ ಸ್ಕೂಟಿಯಲ್ಲಿ ಹೋಗುತ್ತಿದ್ದ ದೊಡ್ಡ ಕನ್ನಹಳ್ಳಿಯ, ಪ್ರಕಾಶ್ (42) ಎಂಬುವರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಪ್ರಕಾಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಡ್ಯ ಮೂಲದ ಪ್ರಕಾಶ್ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ.

ಮತ್ತೊಂದು ಅಪಘಾತದಲ್ಲಿ ಬನ್ನೇರುಘಟ್ಟ ರಸ್ತೆಯ ಚೈತನ್ಯ ಸ್ಕೂಲ್ ಬಳಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ನಲ್ಲಿ ಹೋಗುತ್ತಿದ್ದ ಥಾಮಸ್ (59) ಮೃತಪಟ್ಟಿದ್ದಾರೆ. ಕೋರಮಂಗಲದ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ, ಕನಕಪುರ ತಟ್ಟಗುಪ್ಪೆಯ ಥಾಮಸ್, ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಎರಡು ಪ್ರಕರಣಗಳನ್ನು ಹುಳಿಮಾವು ಸಂಚಾರ ಪೊಲೀಸರು ದಾಖಲಿಸಿ ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ