ಸಮಯ ಬಂದಾಗ ನಾವು ಅಸ್ತ್ರ ಬಳಸ್ತೇವೆ..?

Kannada News

30-08-2017

ಮೈಸೂರು: ಸಚಿವ ಡಿ.ಕೆ ಶಿವಕುಮಾರ್ ಅವರು, ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ತನ್ನ ಮಾವನ ಮನೆಗೆ ಆಗಮಿಸಿದ್ದಾರೆ. ಐಟಿ ರೈಡ್ ನಂತರ, ಇದೇ ಮೊದಲ ಬಾರಿಗೆ ಡಿಕೆಶಿ ಮೈಸೂರಿನ ತನ್ನ ಮಾವನ ಮನೆಗೆ ಭೇಟಿ ನೀಡಿದ್ದಾರೆ. ತಮ್ಮ ಪತ್ನಿಯೊಂದಿಗೆ ಮಾವನ ನಿವಾಸಕ್ಕೆ ಆಗಮಿಸಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು. ಐಟಿ ದಾಳಿಯ ನಂತರ ಮಾವನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್, ತದನಂತರ ಮಾವನ ಮನೆಯಿಂದ ನಿರ್ಗಮಿಸಿ, ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ಪ್ರಶ್ನೆಗೂ ಮರು ಪ್ರಶ್ನೆ ಹಾಕುವ ದಾಟಿಯಲ್ಲಿ ಉತ್ತರ ನೀಡಿದರು. ಐಟಿ ದಾಳಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಮಂಜಸವಾಗಿದೆ, ವಿಜಯ್ ಮುಳುಗುಂದ ರಾಜಕೀಯವಾಗಿ ಬೆಳೆಯುತ್ತಿದ್ದರು, ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಾಗ ಉಸ್ತುವಾರಿ ವಹಿಸಿದ್ದರು, ಆತನ ಮನೆ ಮೇಲೆ ದಾಳಿ ಮಾಡಿದ್ದನ್ನು ಮಾಧ್ಯಮದಿಂದ ತಿಳಿದಿದ್ದೇನೆ ಎಂದರು. ದುಖಃ ದೂರಮಾಡುವ ದೇವಿಯ ದರ್ಶನ ಪಡೆಯಲು ಇಲ್ಲಿಗೆ ಬಂದಿದ್ದೇನೆ, ದುಖಃ ಎಂದರೆ ಕೇವಲ ನನಗಷ್ಟೇ ಅಲ್ಲ, 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ.  ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ ಕಿರುಕುಳ ನಿವಾರಿಸಿಕೊಳ್ಳಲು ಬಂದಿರುವುದಾಗಿ ತಿಳಿಸಿದರು. ಮಾಧ್ಯಮದವರು ಕೂಡ ಹೆಂಡತಿ ಮಕ್ಕಳನ್ನು ಬಿಟ್ಟು ನನ್ನ ಮಾವನ ಮನೆ ಕಾದಿದ್ದೀರಿ ನಿಮಗೂ ಒಳ್ಳೆಯದಾಗಲಿ ಎಂದು ಕೇಳಿದ್ದೇನೆ ಎಂದರು.

ಈ ದಾಳಿಗಳಿಂದ ನನ್ನ ಆತ್ಮಸ್ಥೈರ್ಯ ಕುಂದಿದೆ ಅನ್ನಿಸುತ್ತಿದೆಯೇ? ನಾನು ಸುಮ್ಮನಾದೆ ಎನ್ನಿಸುತ್ತಿದೆಯೇ? ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು. ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿಗೆ ಸಮಯ ಬಂದಾಗ ಬಳಕೆ ಮಾಡ್ತೇವೆ ಎಂದು ನುಡಿದರು. ನಾನು ದೇವಿ ದರ್ಶನ ಪಡೆದಿದ್ದೇನೆ, ಸ್ನೇಹಿತರು ಹೋಮ ಮಾಡಿಸಿದ್ದಾರೆ. ಐಟಿ ದಾಳಿಗಳ ಮೂಲಕ ಎದುರಿಸಿ ಡಿಕೆಶಿಯನ್ನು ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಪ್ರಶ್ನೆಗೆ, ನಿಮಗೆ ಹಾಗೆ ಅನಿಸಿದ್ರೆ ಹಾಗೆ ಅಂದುಕೊಳ್ಳಿ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ