ಬಲವಂತ ಕಿಸ್ ಯುವತಿ ಆತ್ಮಹತ್ಯೆ !

Kannada News

30-08-2017

ಹಾವೇರಿ: ಯುವತಿಗೆ ಬಲವಂತವಾಗಿ ಕಿಸ್ ಮಾಡಿ, ಯುವತಿಯ ಆತ್ಮಹತ್ಯೆಗೆ ಕಾರಣವಾದ ಘಟನೆಯು, ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹನಮಾಪುರ ತಾಂಡಾದಲ್ಲಿ ಘಟನೆ ಸಂಭವಿಸಿದೆ. ಕಳೆದ ಆಗಸ್ಟ್ 26 ರಂದು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮಂಟಪದಲ್ಲಿ ನಡೆದ, ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಯುವತಿ ತೆರಳಿದ್ದ ವೇಳೆ ಘಟನೆ ನೆಡೆದಿದೆ. ಯುವತಿ ರೇಷ್ಮಾ (19) ಆತ್ಮಹತ್ಯೆ ಮಾಡಿಮಾಡಿಕೊಂಡಿರುವ ಯುವತಿ. ಗ್ರಾಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಯುವತಿ ತೆರಳಿದ್ದು, ಅದೇ ಗ್ರಾಮದ ಯುವಕ ಸಂತೋಷ್ ಲಮಾಣಿ (25) ಎಂಬುವನು, ಈ ವೇಳೆ ಬಲವಂತವಾಗಿ ಯುವತಿಯನ್ನು ಚುಂಬಿಸಿದ್ದಾನೆ. ಇದರಿಂದ ಮನನೊಂದ ಯುವತಿಯು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮದ ಬಳಿ ಇರೋ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೆ ಹಾರಿ ಪ್ರಾಣಕಳೆದುಕೊಂಡಿದ್ದಾಳೆ. ಪ್ರಕರಣವು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಆಗ್ರಹಿಸಿ ಮೃತ ಯುವತಿಯ ಸಂಬಂಧಿಕರು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ , ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮತ್ತು ಕೂಡಲೆ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ