ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆ !

Kannada News

30-08-2017

ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ. ಕೆ.ಆರ್‌.ಎಸ್ ಡ್ಯಾಂನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಒಂದೇ ದಿನಕ್ಕೆ ಎರಡು ಅಡಿ ನೀರಿನ ಮಟ್ಟ ಹೆಚ್ಚಿದೆ. ನಿನ್ನೆ 93.65 ಅಡಿ ನೀರಿನ ಸಂಗ್ರಹವಾಗಿತ್ತು, ಇಂದು ಡ್ಯಾಂನಲ್ಲಿ 95.80ಅಡಿಯಷ್ಟು ಸಂಗ್ರಹವಾಗಿದೆ.  ಒಳಹರಿವಿನ ಪ್ರಮಾಣದಲ್ಲಿಯೂ ಭಾರೀ ಹೆಚ್ಚಳವಾಗಿದೆ, ನಿನ್ನೆ 16540 ಕ್ಯೂಸೆಕ್ ನಷ್ಟಿದ್ದ ಒಳಹರಿನ ಪ್ರಮಾಣ ಇಂದು, 27680 ಕ್ಯೂಸೆಕ್‌ ಗೆ ಏರಿದೆ. ಹೊರಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದ್ದು, 8939 ಕ್ಯೂಸೆಕ್‌ ನಷ್ಟಿದ್ದ ಹೊರಹರಿವು, ಇಂದು 10649 ಕ್ಯೂಸೆಕ್‌ ನಷ್ಟಿದೆ. ಇನ್ನು ಅಣೆಕಟ್ಟು ತುಂಬುವ ಮುನ್ನವೇ ಹೊರಹರಿವಿನ ಹೆಚ್ಚಳಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ