ಕಿಟಕಿ ಕಳ್ಳ ಸೆರೆ !

Kannada News

29-08-2017

ಬೆಂಗಳೂರು: ರಾತ್ರಿ ವೇಳೆಯಲ್ಲಿ ಕಿಟಕಿ ಮೂಲಕ ಕೈಹಾಕಿ ಮೊಬೈಲ್, ಇನ್ನಿತರ ಬೆಲೆ ಬಾಳುವ ವಸ್ತಗಳನ್ನು ಕಳವು ಮಾಡುತ್ತಿದ್ದ ಕೊತ್ತನೂರಿನ ಸ್ಟೀವನ್ ಅನ್ಬ್ರ್ರೂ  ಅಲಿಯಾಸ್ ಕೊಕೊ (20) ನನ್ನು ಬಂಧಿಸಿ 45 ಸಾವಿರ ಮೌಲ್ಯದ 2 ಮೊಬೈಲ್‍ ಗಳನ್ನು ಕೊತ್ತನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿಪುರ ಮೂಲದ ಆರೋಪಿಯು ಕಳೆದ ಕೆಲ ದಿನಗಳಿಂದ ಕಿಟಕಿ ಮೂಲಕ ಕೈಹಾಕಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇನ್ನೊಂದೆಡೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಪಶ್ಚಿಮಬಂಗಾಳ ಮೂಲದ ಮೈದುಲ್ ನನ್ನು ಬಂಧಿಸಿರುವ ಬಾಗಲೂರು ಪೊಲೀಸರು 1 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮೈದುಲ್ (27) ದ್ವಾರಕಾನಗರದ 3ನೇ ಮುಖ್ಯರಸ್ತೆಯಲ್ಲಿದ್ದ, ಶಾಂತಿ ಎಂಬುವರ ಮನೆಗೆ ಹಾಡುಹಗಲೇ ನುಗ್ಗಿ ಶೋಕೇಸ್ ನಲ್ಲಿಟ್ಟಿದ್ದ 1 ಲಕ್ಷ ನಗದನ್ನು ಕಳವು ಮಾಡಿ ಪರಾರಿಯಾಗಿದ್ದ. ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಕಿಟಕಿ ಕಳ್ಳನ ಸೆರೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ