ನನ್ನ ವಿರುದ್ಧ ಸುಳ್ಳು ಕೇಸು ದಾಖಲು..?

Kannada News

29-08-2017

ಬಳ್ಳಾರಿ: ಸಂಸದ ಬಿ.ಶ್ರೀರಾಮುಲು ತಮ್ಮ ಸಮುದಾಯ ದುರುಪಯೋಗ ಪಡಿಸಿಕೊಂಡು, ನನ್ನ ವಿರುದ್ಧ ಸುಳ್ಳು ಕೇಸು ದಾಖಲು ಮಾಡಿದ್ದಾರೆ, ಈ ಸಂಬಂಧ ನನ್ನ ಬಳಿ ದಾಖಲೆಗಳಿವೆ ಎಂದು ಬಳ್ಳಾರಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ಹೇಳಿದ್ದಾರೆ. ಬಳ್ಳಾರಿಯ ತಮ್ಮ ನಿವಾಸದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಜಮೀನು ವಿವಾದ ಸಂಬಂಧ, ತಮ್ಮ ಸೋಮಶೇಖರ ರೆಡ್ಡಿ ಸಂಧಾನಕ್ಕೆ ಸಂಪರ್ಕಿಸಿಲ್ಲ, ಒಂದು ವೇಳೆ ಸಂಧಾನಕ್ಕೆ ಮುಂದಾದರೂ ನಾನು ಒಪ್ಪುವುದಿಲ್ಲ, ಕೋರ್ಟ್ ನಲ್ಲಿ ವಿಚಾರಣೆ ಮುಂದುವರೆದಿದೆ ಎಂದರು. ನಾನು ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಕೇವಲ ಊಹಾಪೋಹ, ನಾನು ಯಾವಾಗಲೂ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ, ಹರಪನಹಳ್ಳಿ ಕ್ಷೇತ್ರದ ವಿವಿಧ ಸಮುದಾಯದವರು ಬೆಂಬಲ ನೀಡುತ್ತಿದ್ದಾರೆ, ಹರಪನಹಳ್ಳಿ  ಕ್ಷೇತ್ರದಲ್ಲಿ ರಾಜಕೀಯವಾಗಿ ಮುಂದುವರೆಯಲಿದ್ದೇನೆ, ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಮುಂದೆ ಸಾಗುತ್ತೇನೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ