ಶ್ರೀಕಂಠದತ್ತ ಒಡೆಯರ್ ಪ್ರತಿಮೆ ಸ್ಥಾಪಿಸಬೇಕು..?

Kannada News

29-08-2017

ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ‘ಅರಮನೆ ಉಳಿಸಿ ಹೋರಾಟ ಸಮಿತಿ’ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಈ ಕುರಿತು ಸಮಗ್ರ ಕರ್ನಾಟಕ ರಾಜ್ಯ ಅರಸು ಸಂಘದವರು ಮನವಿ ಸಲ್ಲಿಸಿದ್ದು, ಅದನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ರಾಜೇಂದ್ರ ಶ್ರೀಗಳ ಪುತ್ಥಳಿ ನಿರ್ಮಾಣ ಸ್ಥಳ ಕೈಬಿಟ್ಟು ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಇದು ತಪ್ಪಿದಲ್ಲಿ ಯದುವಂಶದ ಮಹಾರಾಜರ ಅಭಿಮಾನಿಗಳ ನಾನಾ ಸಂಘಸಂಸ್ಥೆಗಳಿಂದ ಹಂತಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸೋಸಲೆ ಸಿದ್ದರಾಜು, ಎಂ.ರಾಮೇಗೌಡ, ಅಶ್ವತ್ಥ ನಾರಾಯಣ ರಾಜೇ ಅರಸ್, ಮಧುವನ ಚಂದ್ರು, ಭಾನುಮೋಹನ್, ಸುಬ್ರಹ್ಮಣ್ಯರಾಜೇ ಅರಸ್, ನಂದೀಶ್,ಪ್ರಕಾಶ್ ರಾಜೇ ಅರಸ್, ಚಿನ್ನಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ