ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ !

Kannada News

29-08-2017

ಬೆಂಗಳೂರು: ತಂದೆ-ತಾಯಿ ದೂರವಾಗಿದ್ದರಿಂದ, ಮಾನಸಿಕ ಖಿನ್ನತೆಗೊಳಗಾಗಿದ್ದ 13 ವರ್ಷದ ಬಾಲಕನೋರ್ವ ನೇಣಿಗೆ ಶರಣಾಗಿದ್ದಾನೆ. ಸಂಪಂಗಿ ರಾಮನಗರದ ವಿನಾಯಕ ಶಾಲೆಯಲ್ಲಿ 8ನೇ ಓದುತ್ತಿದ್ದ ಪ್ರವೀಣ್ ಎಂದು ಆತ್ಮಹತ್ಯೆ ಶರಣಾದ, ಬಾಲಕನನ್ನು ಗುರುತಿಸಲಾಗಿದೆ. ತಂದೆ ಆನಂದ್‍ ಕುಮಾರ್, ತಾಯಿಯಿಂದ ದೂರವಿದ್ದರು. ತಾಯಿಯೊಂದಿಗೆ ಸಂಪಂಗಿ ರಾಮನಗರದ 12ನೇ ಮುಖ್ಯರಸ್ತೆಯ ಮನೆಯಲ್ಲಿ ತಾಯಿ ಕೆಲಸಕ್ಕೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾನೆ. ಕೆಲದಿನಗಳಿಂದ ಖಿನ್ನತೆಗೊಳಗಾಗಿದ್ದ ಆತ ಒಂಟಿಯಾಗಿರಲು ಬಯಸುತ್ತಿದ್ದ. ಶಾಲೆಯಲ್ಲೂ ಯಾರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ ತಾಯಿ-ತಂದೆ ಬೈಯುತ್ತಿದ್ದರು ಎಂದು ಡೆತ್‍ ನೋಟ್ ಬರೆದಿಟ್ಟಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ