ಲಾಂಗ್ ಹಿಡಿದು ಬಾರ್ ಗೆ ನುಗ್ಗಿ ದರೋಡೆ !

Kannada News

29-08-2017 240

ಬೆಂಗಳೂರು: ದೇವನಹಳ್ಳಿಯ ಗೊಲ್ಲಹಳ್ಳಿಯಲ್ಲಿನ ಬಾರ್ ಒಂದಕ್ಕೆ ಲಾಂಗ್‍ ಗಳನ್ನು ಹಿಡಿದು ನುಗ್ಗಿದ್ದ ದರೋಡೆಕೋರರು ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದಾರೆ. ಕಳೆದ ಭಾನುವಾರ ರಾತ್ರಿ, ಈ ಭಯಾನಕ ಘಟನೆ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ. ಬಾಗಲೂರು ಪೊಲೀಸರು ಪ್ರಕರಣ ದಾಖಸಿಕೊಂಡು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಗೊಲ್ಲಹಳ್ಳಿಯಲ್ಲಿ ಹೊರವಲಯದ ಶ್ರೀನಿವಾಸ್ ವೈನ್ಸ್ ಗೆ  ಲಾಂಗ್‍ ಗಳನ್ನು ಹಿಡಿದು ಒಳ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು ಮೊದಲು ಕ್ಯಾಷಿಯರ್ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿ, ಅಲ್ಲಿದ್ದವರನ್ನು ಬೆದರಿಸಿ ಬಾರ್‍ ನಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಭಯಾನಕ ದೃಶ್ಯ ಬಾರ್‍ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕ್ಯಾಷ್ ಬಾಕ್ಸ್‍ ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಖದೀಮರು ದೋಚಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ಗಾಯಗೊಂಡಿರುವ ಕ್ಯಾಷಿಯರ್ ರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದರೋಡೆಕೋರರ ಕೃತ್ಯ ಬಾರ್‍ ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ