ಕೋಮ-ಸೌಹಾರ್ದ ಕದಡುವುದೇ ಅವರ ಅಜೆಂಡಾ..?

Kannada News

29-08-2017

ಮೈಸೂರು: ಬಿಜೆಪಿಯಿಂದ ನವಕರ್ನಾಟಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಹೆಸರಿಟ್ಟುಕೊಂಡು ದಾರಿ ತಪ್ಪಿಸಲು ಸಾಧ್ಯವಿಲ್ಲ, ಜನರನ್ನು ದಾರಿ ತಪ್ಪಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಧರ್ಮದ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಜನರ ಓಲೈಕೆಗೆ ಈ ರೀತಿ ಹೇಳುತ್ತಾರೆ, ಆದರೆ ಅವರ ಹಿಡನ್ ಅಜೆಂಡ್ ಬೇರೆ ಇದೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು. ಕೋಮ ಸೌಹಾರ್ದತೆ ಕದಡುವುದು ಅವರ ಅಜೆಂಡಾ. ಅವರು ಕರ್ನಾಟಕದಲ್ಲಿ ಈ ವಿಚಾರವಾಗಿ ರಾಜಕೀಯ ಲಾಭ ಪಡೆಯಲು ಸಾಧ್ಯವಿಲ್ಲ, ಇದು ಬಸವಣ್ಣನವರು, ಕುವೆಂಪು, ಕನಕದಾಸರ ನಾಡು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇನ್ನು ತಮ್ಮ ಮಕ್ಕಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರಕ್ಕೆ, ಪ್ರತಿಕ್ರಿಯೆ ನೀಡಲು ನಕಾರ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ. ಸದ್ಯಕ್ಕೆ ನಾನು ವರುಣ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ, ಮಹದೇವಪ್ಪ ಟಿ.ನರಸೀಪುರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ, ಮುಂದಿನ ಚುನಾವಣೆಯ ನಿರ್ಧಾರವನ್ನು ಮುಂಬರುವ ದಿನಗಳಲ್ಲಿ ನೋಡೋಣ ಎಂದು, ಯತೀಂದ್ರ ಹಾಗೂ ಸುನೀಲ್ ಬೋಸ್‌ ಗೆ ಟಿಕೆಟ್ ‌ನೀಡುವ ವಿಚಾರಕ್ಕೆ ಉತ್ತರಿಸದೆ ನಿರ್ಗಮಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ