ಮಿತಿಮೀರಿದ ಕೋತಿಗಳ ಹಾವಳಿ !

Kannada News

29-08-2017

ಮೈಸೂರು: ಮೈಸೂರಿನಲ್ಲಿ‌ ಕೋತಿಗಳ ಹಾವಳಿ ಮಿತಿಮೀರಿದ್ದು, ನಗರದ ಜೆ.ಪಿ.ನಗರದಲ್ಲಿ ಸಾರ್ವಜನಿಕರಿಗೆ ಅತಿಯಾಗಿ ತೊಂದರೆ ನೀಡುತ್ತಿರುವ ಕಪಿಗಳು, ಮನೆಯೊಳಕ್ಕೆ ನುಗ್ಗಿ ಕಿರಿಕಿರಿ ಉಂಟು ಮಾಡುತ್ತಿದ್ದು, ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ತೊಂದರೆ ಕೊಡುತ್ತಿವೆ. ಓಡಿಸಲು ಹೋದವರ ಮೇಲೆಯೇ ಕೋತಿಗಳಿ ಎರಗುತ್ತಿದ್ದು ಜನ ಭಯಭೀತರಾಗಿದ್ದಾರೆ. ಕೋತಿಗಳ ಕಾಟದಿಂದ ಬೆಸತ್ತ ಜೆ.ಪಿ.ನಗರ ಬಡಾವಣೆ ನಿವಾಸಿಗಳು, ಪಾಲಿಕೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದೀಗ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೋತಿ ಹಿಡಿಯುವಂತೆ ಪತ್ರವನ್ನು ಬರೆದಿದ್ದಾರೆ. ಕೋತಿಗಳನ್ನು ಹಿಡಿದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.‌


ಸಂಬಂಧಿತ ಟ್ಯಾಗ್ಗಳು

ಮೈಸೂರು ಕೋತಿಗಳಿಂದ ಭಯಭೀತರಾದ ಜನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ