ಔತಣಕೂಟ: ರಾಜಕೀಯ ಗಿಮಿಕ್..?

Kannada News

29-08-2017

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆಗೆ ದಲಿತರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದು, ಕೇವಲ ರಾಜಕೀಯ ಗಿಮಿಕ್ ಎಂದು ಸಿಎಂ ಸಿದ್ದರಾಮಯ್ಯ, ವಾಗ್ದಾಳಿ ನಡೆಸಿದ್ದಾರೆ.  ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಏಕೆ ದಲಿತರ ಮನೆಗೆ ಹೋಗಲಿಲ್ಲಾ? ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ದಲಿತರಿಗಾಗಿ ಏನು ಮಾಡಿದ್ರು, ಅವತ್ತು ಅವರಿಗೆ ದಲಿತರು ನೆನಪಾಗಲಿಲ್ವಾ, ಇವತ್ತು ಊಟಕ್ಕೆ ಕರೆದು ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನಾನು ದಿನವೂ ದಲಿತರಿಗೆ ಮನೆಯಲ್ಲಿ ಊಟ ಹಾಕುತ್ತೇನೆ. ಅದನ್ನು ವಿಶೇಷ ಎಂದು ನಾವು ಪರಿಗಣಿಸಿಲ್ಲ. ಆದರೆ ಯಡಿಯೂರಪ್ಪ ತಮ್ಮ ಮನೆಗೆ ಊಟಕ್ಕೆ ಕರೆದವರು ಮಾತ್ರ ದಲಿತರಾ? ಬೇರೆ ದಲಿತರು ಇಲ್ವಾ? ಎಂದರು. ಇನ್ನು ಶಿಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ