ಸಿಎಂ ಓದಿದ ಶಾಲೆಯಲ್ಲಿ ಮತ್ತೆ ಗೊಂದಲ..?

Kannada News

29-08-2017

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಓದಿದ ಶಾಲೆಯಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಮೈಸೂರು ತಾಲ್ಲೂಕು ಕುಪ್ಪೆಗಾಲ ಶಾಲೆಯಲ್ಲಿ, ಶಾಲೆಯ ಅಡುಗೆ ಕೆಲಸಕ್ಕೆ ದಲಿತ ಸಮುದಾಯದವರು ಬಾರದಿರುವುದು ಗೊಂದಲಕ್ಕೆ ಕಾರಣವಾಗಿದೆ.  ಶಾಲೆಯ ಅಡುಗೆ ಸಹಾಯಕ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆದರೆ ಪರಿಶಿಷ್ಟ ಜಾತಿ ಮಹಿಳೆಯರಿಗೆ ಅರ್ಜಿ ಹಾಕದಂತೆ ಬೆದರಿಕೆ ಒಡ್ಡಿದ್ದಾರೆ ಎಂದು, ಗ್ರಾಮದ ದಲಿತ ಸಮುದಾಯದ ಮುಖಂಡರು ಆರೋಪಿಸಿದ್ದಾರೆ. 2014ರಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮಾಡಿದ ಊಟ ಮಾಡಲು ಮಕ್ಕಳು ನಿರಾಕರಿಸಿದ್ದರು, ಈ ಬಗ್ಗೆ ರಾಜ್ಯ ಮಟ್ಟದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ನಂತರ ಎಚ್ಚೆತ್ತ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿತ್ತು. ಆದರೆ ಈ ವರ್ಷದ ಶೈಕ್ಷಣಿಕ ವರ್ಷದ ಆರಂಭದಿಂದಲೂ ಹುದ್ದೆ ಖಾಲಿಯಾಗಿದ್ದು, ಜೂನ್ ತಿಂಗಳಲ್ಲೇ ಅಡುಗೆ ಸಹಾಯಕಿ ಹುದ್ದೆ ತೊರೆದಿದ್ದರು. ಇದರಿಂದ ತೆರವಾಗಿದ್ದ, ಅಡುಗೆ ಸಹಾಯಕರ ಹುದ್ದೆಗೆ  ಶಾಲಾ ಆಡಳಿತ ಮಂಡಳಿ ಅರ್ಜಿ ಆಹ್ವಾನಿಸಿತ್ತು, ಆದರೆ ಪರಿಶಿಷ್ಟ ಮಹಿಳೆಯರು ಕೆಲಸಕ್ಕೆ ಅರ್ಜಿ ಸಲ್ಲಿಸದಿದ್ದು, ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಸವರ್ಣೀಯ ಮಹಿಳೆಯನ್ನು ಶಾಲಾ ಆಡಳಿತ ಮಂಡಳಿ ನೇಮಕ ಮಾಡಿಕೊಂಡಿದೆ. ಇದೀಗ ಮತ್ತೆ ಸವರ್ಣೀಯರ ನೇಮಕದಿಂದ ಅಸ್ಪೃಶ್ಯತೆ ಆಚರಣೆ ಆರೋಪ ಕೇಳಿಬಂದಿದೆ. ಆರೋಪ ನಿರಾಕರಿಸಿದ ಶಾಲಾ ಮುಖ್ಯ ಶಿಕ್ಷಕ ಚಿಕ್ಕದೇವ, ಕೆಲಸದ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಈ ಬಗ್ಗೆ ತಿಳುವಳಿಕೆ ಪತ್ರ ಕೂಡ ಹೊರಡಿಸಲಾಗಿತ್ತು, ಆದರೆ ಯಾರು ಅರ್ಜಿ ಸಲ್ಲಿಸಲಿಲ್ಲ. ಈಗಲೂ ಯಾರಾದರೂ ಪರಿಶಿಷ್ಟ ಸಮುದಾಯದ ಮಹಿಳೆ ಅರ್ಜಿ ಸಲ್ಲಿಸಿದರೆ ಅವರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ