ಪುರುಷರಿಗೆ ಕರೆ ಮಾಡಿ ವಂಚನೆ: ಯುವತಿ ಬಂಧನ !

Kannada News

29-08-2017

ಮೈಸೂರು: ಪುರುಷರನ್ನು ಪರಿಚಯ ಮಾಡಿಕೊಂಡು, ವಂಚಿಸುತ್ತಿದ್ದ ಯುವತಿಯೊರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಅಶೋಕಪುರಂ ನಿವಾಸಿ ಮಾಲ ಬಂಧಿತ ಯುವತಿ. ಮೈಸೂರಿನ ಜೆ.ಪಿ. ನಗರದ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ವಂಚಿಸಿದ್ದಾರೆ. ದಾರಿಯಲ್ಲಿ ಹೋಗುವಾಗ ನೋಡಿ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆದು, ಆಗಾಗ ಮಾತನಾಡುತ್ತಿದ್ದ ಯವತಿ. ಬಳಿಕ ವ್ಯಕ್ತಿಯನ್ನು ಅಜ್ಞಾತ ಸ್ಥಳಕ್ಕೆ  ಕರೆಸಿಕೊಂಡು, ತನ್ನ ಕಡೆಯ ಯುವಕರಿಂದ ಹಲ್ಲೆ ನಡೆಸಿ, ಖಾಲಿ ಚೆಕ್ ಗೆ ಸಹಿ ಮಾಡಿಸಿಕೊಂಡು ವಂಚಿಸಿದ್ದಾಳೆ. ಈ ಸಂಬಂಧ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲರನ್ನು ಬಂಧಿಸಿದ್ದಾರೆ. ಇದೇ ರೀತಿ ಹಲವರನ್ನು ವಂಚಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ವಿಚಾರಣೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ