ಸಿ.ಎಫ್‌.ಟಿ.ಆರ್‌.ಐ ನಿರ್ದೇಶಕರ ವರ್ಗಾವಣೆ !

Kannada News

29-08-2017

ಮೈಸೂರು: ಕನ್ನಡ ವಿರೋಧಿ ಧೋರಣೆ ಅನುಸರಿಸಿದ ಆರೋಪ ಹೊತ್ತಿದ್ದ, ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿ.ಎಫ್‌.ಟಿ.ಆರ್‌.ಐ) ನಿರ್ದೇಶಕರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಫ್‌ಟಿ‌ಆರ್‌ಐ ನಿರ್ದೇಶಕ ಪ್ರೊ.ರಾಮರಾಜಶೇಖರನ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಸಿಎಫ್‌ಟಿಆರ್‌ಐ ನಿರ್ದೇಶಕ ಸ್ಥಾನದಿಂದ, ದೆಹಲಿಯ ಕೇಂದ್ರ ಸಂಸ್ಥೆಯ ಲ್ಯಾಬ್ ವಿಭಾಗದ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯಿಂದ ಈ ಬಗ್ಗೆ, ಅಧಿಕೃತ ಆದೇಶ ಹೊರಡಿಸಿದೆ. ರಾಮರಾಜಶೇಖರನ್ ಅವರ ಸ್ಥಾನಕ್ಕೆ ಡಾ.ಜಿತೇಂದ್ರ ಜಾಧವ್ ನೇಮಿಸಿದೆ. ಡಾ. ಜಿತೇಂದ್ರ ಜಾಧವ್ ಅವರು ಬೆಂಗಳೂರಿನ ಸಿ.ಎಸ್.ಆರ್‌.ಐ ಸಂಸ್ಥೆಯ ನಿರ್ದೇಶಕರಾಗಿದ್ದು, ಮೈಸೂರಿನ ಸಿ.ಎಫ್‌.ಟಿ.ಆರ್‌.ಐ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಲು ಸೂಚಿಸಿದೆ.  ಪ್ರೊ. ರಾಮರಾಜಶೇಖರನ್ ಮೇಲೆ ಕನ್ನಡ ಪರ ಸಂಘಟನೆಗಳು ಕನ್ನಡ ವಿರೋಧಿ ನೀತಿಯ ಆರೋಪ ಮಾಡಿದ್ದವು, ಅಲ್ಲದೇ ಇತ್ತೀಚೆಗಷ್ಟೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಜಿ. ಸಿದ್ದರಾಮಯ್ಯ ಸಹ ಸಿ.ಎಫ್‌.ಟಿ.ಆರ್‌.ಐ ಗೆ ಭೇಟಿ ನೀಡಿ, ಕನ್ನಡ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದ್ದರು, ಇದರ ಬೆನ್ನಲ್ಲೇ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ