ಗಣೇಶನ ಮೂರ್ತಿ ಮೆರವಣಿಗೆ: ಬಾಲಕ ಸಾವು !

Kannada News

28-08-2017

ಬೆಂಗಳೂರು: ವಿಸರ್ಜನೆಗೆ ಹೋಗುತ್ತಿದ್ದ ಗಣೇಶ ಮೂರ್ತಿಯಿದ್ದೆ ಟೆಂಪೋ ಹರಿದು ಬಾಲಕನೊಬ್ಬ ಮೃತಪಟ್ಟಿರುವ ದುರ್ಘಟನೆಯು ನಗರದ ಕುರುಬರಹಳ್ಳಿಯಲ್ಲಿ ನಡೆದಿದೆ. ಅವಘಡಕ್ಕೆ ಕುರುಬರಹಳ್ಳಿಯ 15 ವರ್ಷದ ವೆಂಕಟೇಶ ಮೃತ ದುರ್ದೈವಿಯಾಗಿದ್ದಾನೆ, ಗಜಾನನ ಯುವಕರ ಸಂಘ ಕುರುಬರಹಳ್ಳಿ, ಜೆಸಿ ನಗರದ ಕೆ.ಇ.ಬಿ ಬಳಿ ಗಣೇಶನ ಪ್ರತಿಷ್ಠಾಪಿಸಿ, ನಿನ್ನೆ ರಾತ್ರಿ ಮೂರ್ತಿ ವಿಸರ್ಜನೆ ಮಾಡಲು ಹೋಗುತ್ತಿದ್ದಾಗ 11ನೇ ಮುಖ್ಯರಸ್ತೆಗೆ ಬರುತ್ತಿದ್ದಂತೆ, ಟೆಂಪೋ ಚಾಲಕನ ನಿಯಂತ್ರಣ ಕಳೆದುಕೊಂಡು, ರಸ್ತೆಯಲ್ಲಿ ನಿಲ್ಲಿಸಿದ್ದ ಗಾಡಿಗಳಿಗೆ, ಜನರಿಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಟೆಂಪೋ ಅಡಿ ಸಿಕ್ಕ ವೆಂಕಟೇಶ್ ಮೃತಪಟ್ಟು, ಆರೇಳು ಮಂದಿ ಗಾಯಗೊಂಡಿದ್ದಾರೆ. ಮರಳುದಿಬ್ಬಕ್ಕೆ ಟೆಂಪೊ ಡಿಕ್ಕಿ ಹೊಡೆದು ನಿಲ್ಲದೇ ಇದ್ದಲ್ಲಿ ಮತ್ತಷ್ಟು ಅನಾಹುತ ಆಗುತ್ತಿತ್ತು. ಚಾಲಕ ಕುಡಿದು ಟೆಂಪೊ ಚಲಾಯಿಸಿ ಅಪಘಾತವೆಸಗಿದ್ದಾನೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಟೆಂಪೋ ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ