ಜಮೀನು ವಿವಾದ: ರೈತನ ಕೊಲೆ !

Kannada News

28-08-2017 408

ಬೆಂಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೈತರೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಆನೇಕಲ್‍ ಆಡೆಸೊನ್ನಟ್ಟಿ ಬಳಿ ನಡೆದಿದೆ. ಆಡೆಸೊನ್ನಟ್ಟಿಯ ಪ್ರಕಾಶ್ (35) ಕೊಲೆಯಾದ ರೈತ. ಜಮೀನು ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರೇ ಪ್ರಕಾಶ್‍ ನನ್ನು ಆಡೆಸೊನ್ನಟ್ಟಿಯ, ವಕೀಲ್ ಲೇಔಟ್ ಬಳಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ, ಕೊಲೆಗೈದ ಪ್ರಕಾಶ್‍ ನ ಸಂಬಂಧಿಕರಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಗ್ರಾಮಾಂತರ ಎಸ್.ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ