ಗುರಾಯಿಸಿ, ಜಗಳ ತೆಗೆದಿದ್ದಕ್ಕೆ ಕೊಲೆ !

Kannada News

28-08-2017

ಬೆಂಗಳೂರು: ಗಣೇಶನ ಪ್ರತಿಷ್ಠಾಪನಾ ಸ್ಥಳಕ್ಕೆ ಕುಡಿದು ಬಂದು ಜಗಳ ತೆಗೆದು ರಂಪಾಟ ಮಾಡಿದ, ಕಾರು ಚಾಲಕನೊಬ್ಬನನ್ನು ಆರೇಳು ಮಂದಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ, ಪರಾರಿಯಾಗಿರುವ ಘಟನೆ ಹನುಮಂತನಗರದ ಅವಲಹಳ್ಳಿ ಮುಖ್ಯರಸ್ತೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಕಾಳಿದಾಸ ಲೇಔಟ್‍ ನ ಕಾರು ಚಾಲಕ ಗಣೇಶ್ (21) ಎಂದು ಕೊಲೆಯಾದ ಕಾರು ಚಾಲಕನನ್ನು ಗುರುತಿಸಲಾಗಿದೆ. ಕೃತ್ಯವೆಸಗಿದ ಪೃಥ್ವಿ ಮತ್ತವನ ಸ್ನೇಹಿತರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಅವಲಹಳ್ಳಿ ಮುಖ್ಯರಸ್ತೆಯಲ್ಲಿ ಪೃಥ್ವಿ ಮತ್ತವನ ಸಂಗಡಿಗರು ಗಣೇಶನ ಪ್ರತಿಷ್ಠಾಪನೆ ಮಾಡಿದ್ದು, ಅಲ್ಲಿಗೆ ರಾತ್ರಿ 7.30ರ ವೇಳೆ ಕುಡಿದ ಮತ್ತಿನಲ್ಲಿ ಬಂದ ಗಣೇಶ, ಪೃಥ್ವಿಗೆ ಚಮಕಾಯಿಸಿ, ಗುರಾಯಿಸಿ ಜಗಳ ತೆಗೆದಿದ್ದಾನೆ. ಇದನ್ನು ಪ್ರಶ್ನಿಸಿದ ಪೃಥ್ವಿ ಇನ್ನಿಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಪೃಥ್ವಿ ಮತ್ತವನ ಸಂಗಡಿಗರು ಗಣೇಶನ ಬಳಿಯಿದ್ದ ಚಾಕು ಕಸಿದು ಕೊಂಡು ಆತನ ಹೊಟ್ಟೆ, ಎದೆ ಇನ್ನಿತರ ನಾಲ್ಕೈದು ಕಡೆಗಳಲ್ಲಿ ಇರಿದು ಪರಾರಿಯಾಗಿದ್ದಾರೆ ಎಂದು, ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್‍ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9ರ ವೇಳೆ ಮೃತಪಟ್ಟಿದ್ದಾನೆ. ಗಣೇಶ್‍ಗೆ ಕಳೆದ ತಿಂಗಳಷ್ಟೇ ವಿವಾಹ ನಿಶ್ಚಯವಾಗಿ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೂ ಮೊದಲೇ ರಸ್ತೆಯಲ್ಲಿ ಯುವಕರೊಂದಿಗೆ ಕಿರಿಕ್ ಮಾಡಿಕೊಂಡು ಕೊಲೆಯಾಗಿದ್ದಾನೆ. ಪ್ರಕರಣ ದಾಖಲಿಸಿರುವ ಹನುಮಂತ ನಗರ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ